ಉಡುಪಿ: ಜಿಲ್ಲಾ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ
ಕೋಟ್ಪಾ ತನಿಖಾ ದಳ ತಂಡವು ಪುನರಾವರ್ತಿತ ದಾಳಿಗಳನ್ನು ನಡೆಸಿ, ದಂಡಗಳನ್ನು ವಿಧಿಸಿ, ಅರಿವನ್ನು ಮೂಡಿಸಿದರೂ ಸಹ, ಕೆಲವು ಅಂಗಡಿಗಳು ಕಾಯಿದೆಯನ್ನು ಉಲ್ಲಂಘನೆ ಮಾಡುತ್ತಿದ್ದು, ಅಂತಹ ಅಂಗಡಿಗಳ ಉದ್ದಿಮೆಯ ಪರವಾನಗಿಯನ್ನು ರದ್ದುಪಡಿಸಲಾಗಿರುತ್ತದೆ.
ಜಿಲ್ಲೆಯಾದ್ಯಂತ ಮುಂದಿನ ಯುವ ಪೀಳಿಗೆಯನ್ನು ತಂಬಾಕು ದುರುಪಯೋಗದಿಂದ ರಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.












