ಉಡುಪಿ:ಕಾಪು ಬೀಚ್ ನಲ್ಲಿ ಗೂಡುದೀಪ ಸ್ಪರ್ಧೆ


ಕಾಪು:ಗ್ರಾವಿಟಿ ಡಾನ್ಸ್ ಕ್ರೀವ್ ಹಾಗೂ ಕಿಂಗ್ ಟೈಗರ್ಸ್ ಕಾಪು ಇದರ ಜಂಟಿ ಆಶ್ರಯದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ ತಾರೀಖು 02.11.2024 ರಂದು ಕಾಪು ಲೈಟ್ ಹೌಸ್ ಬೀಚ್ ಬಳಿ ಬೀಚ್ ವೀಕ್ಷಕರ ಜನಸಂದಣಿಯ ಮದ್ಯ ಬಾರಿ ಅದ್ಧೂರಿಯಲ್ಲಿ ನಡೆಯಿತು.

ಗೂಡುದೀಪ ಸ್ಪರ್ಧೆಯ ಕಾರ್ಯಕ್ರಮವನ್ನು ಸಮಾಜಸೇವೆಯಲ್ಲಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತರಾದ ಗ್ರಾವಿಟಿ ಡಾನ್ಸ್ ಕ್ರೀವ್ ಗ್ರೂಪ್ ನ ಗೌರವ ಅಧ್ಯಕ್ಷ ರಾದ ದಿವಾಕರ್.ಬಿ.ಶೆಟ್ಟಿಯವರು ಉದ್ಘಾಟಿಸಿ ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಕಿಂಗ್ ಟೈಗರ್ಸ್ ಕಾಪು ಇದರ ಅಧ್ಯಕ್ಷ ರಾದ ರೋಶನ್ ಕಾಪು ವಹಿಸಿದರು.ಮುಖ್ಯ ಅಥಿತಿಯಾಗಿ ಕ್ರಿಷ್ಣ ಜನ್ಮಾಷ್ಟಮಿಯ ದಿನ ವಿಭಿನ್ನ ವೇಷಗಳನ್ನು ಹಾಕುವ ಮೂಲಕ ಬಡ ಜನರ ಆರೋಗ್ಯ ಸಮಸ್ಯೆ ಗಳಿಗೆ ಸಹಕರಿಸಿದ ಶ್ರೀ ಯುತ ರಾಮಂಜಿ ಇವರು ಮಾತನಾಡಿ ಈಗಿನ ಕಾಲದಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪ ಕಣ್ಮರೆ ಆಗುವ ಸಮಯದಲ್ಲಿ ಇದೀಗ ಸಮಾಜದ ಮುಂದೆ ಗೂಡುದೀಪಗಳನ್ನು ತೋರಿಸುವ ಮೂಲಕ ,ಸ್ಪರ್ಧೆ ಮಾಡುವ ಮೂಲಕ ಸಂಘಟಕರು ಆಯೋಜನೆ ಮಾಡಿದ್ದಾರೆ.ಇದು ಸಂಸ್ಕೃತಿಯನ್ನು ಮುನ್ನಡೆ ತಂದು ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಹೇಳಿದರು.

ತೀರ್ಪುಗಾರರಾಗಿ ಬಂದ ತೆಕ್ಕಟ್ಟೆ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕಿ ನಮಿತಾ.ರ್.ದಿನೇಶ್, ಕಾಪು ಬೀಚ್ ನಿರ್ವಾಹಕರು ಚಂದ್ರಶೇಖರ ಮೆಂಡನ್,ಜಸ್ಟ್ ಡೆಕಾರ್ ಇವೆಂಟ್ ಮೇನೇಜ್ಮೆಂಟ್ ಇದರ ಮುಖ್ಯಸ್ಥರ ಪ್ರಸನ್ನ ಶೆಟ್ಟಿ ಮಜೂರು, ವೇದಿಕೆಯಲ್ಲಿ ಉಪಸ್ಥಿತರಿದ್ದ ಗ್ರಾವಿಟಿ ಡಾನ್ಸ್ ಗ್ರೂಪ್‌ನ ಸಂಚಾಲಕ ರತ್ನಾಕರ್ ಕಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹಾಗೂ ಟೀಮ್ ಗ್ರಾವಿಟಿಯ ಎಲ್ಲಾ ಸದಸ್ಯರು ಸ್ಥಳದಲ್ಲಿ ಉಪಸ್ಥಿತರಿದ್ದರು.

ಎರಡು ವಿಭಾಗದಲ್ಲಿ ಬಹುಮಾನ ಪಡೆದ ಪ್ರಥಮ ದ್ವೀತಿಯ ತೃತೀಯ ನಗದು ಹಣ,ಶಾಶ್ವತ ಪ್ರಮಾಣ ಪತ್ರ ಹಾಗೂ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಗ್ರಾವಿಟಿ ಡಾನ್ಸ್ ಕ್ರೀವ್ ತಂಡದವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಕಾಪು ಬೀಚ್ ಬರುವ ವೀಕ್ಷಕರ ಜನಸ್ತೋಮ ದಿಂದ ಪಾರ್ಕಿಂಗ್ ವ್ಯವಸ್ಥೆ ಮಾಡಲು ಪೋಲಿಸರು ಹರಸಾಹಸ ಮಾಡಬೇಕಾಯಿತು.ಪ್ರತಿನ್ ಶೆಟ್ಟಿ ಕಾಪು ಧನ್ಯವಾದ ನೀಡಿ ಮಣಿಪಾಲ್ ಕಂಪ್ಯೂಟರ್ ಅಕಾಡಮಿ ಇದರ ಸಂಚಾಲಕ ರಮೇಶ್ ನಾಯಕ್ ಕಾಪು ಇವರು ಕಾರ್ಯಕ್ರಮ ನಿರೂಪಿಸಿದರು.