ಉಡುಪಿ:ಎ.9 ಮತ್ತು 12ರಂದು ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ತ್ರಿಪುರಾಂಬಿಕಾ ಮಹಾಯಾಗ

ಉಡುಪಿ:ದೊಡ್ಡಣಗುಡ್ಡೆ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಎ. 9 ಮತ್ತು 12ರಂದು ಶ್ರೀ ಲಲಿತಾ ಸಹಸ್ರ ಕದಳೀಯಾಗವು ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ನೆರವೇರಲಿದೆ.

ಬಹು ಫಲಪ್ರದವಾದ ಈ ಮಹಾನ್ ಯಾಗದಲ್ಲಿ ಬ್ರಾಹ್ಮಣ ಸುವಾಸಿನಿ ಆರಾಧನೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ.ಸಹಸ್ರ ಸಹಸ್ರ ಸಂಖ್ಯೆಯ ಕದಳಿ ಹಣ್ಣನ್ನು ತ್ರಿಮದುರಯುಕ್ತವಾಗಿ ಹೋಮಿಸಿ ವಿಧ ವಿಧದ ಕುಸುಮಗಳಿಂದ ತ್ರಿಪುರಾಂಬಿಕೆಯನ್ನು ಅರ್ಚಿಸಿ, ನಾಮಾವಳಿಗಳಿಂದ ಸ್ತುತಿಗೈದು ಆಕೆಯ ಆರಾಧನೆಯನ್ನು ಮಾಡಿ ಅನುಗ್ರಹವನ್ನು ಯಾಚಿಸುವ, ಏಕ ಕಾಲದಲ್ಲಿ ಇಹದಲ್ಲಿ ಭೋಗ, ಪರದಲ್ಲಿ ಮೋಕ್ಷವನ್ನು ಪಡೆಯಬಹುದಾದ ವಿಶಿಷ್ಟವಾದ ಯಾಗವಾಗಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.