ಉಡುಪಿ:ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಉಡುಪಿ ಇಂದ್ರಾಳಿ , ಹಾಗೂ ಜಯಂಟ್ಸ್ ಗ್ರೂಪ್ ಉಡುಪಿ , ಮಣಿಪಾಲ್ ಕೆ.ಎಮ್. ಸಿ ಆಸ್ಪತ್ರೆ ದಂತ ನುರಿತ ವೈದ್ಯರ ಜಂಟಿ ಆಶ್ರಯದಲ್ಲಿ ದಿನಾಂಕ ಜ 05 ಶನಿವಾರ ಬೆಳ್ಳಿಗೆ 9 ರಿಂದ ಮದ್ಯಾಹ್ನ 1 ವರಗೆ ರೈಲ್ವೆ ನಿಲ್ದಾಣ ರಸ್ತೆ ಇಂದ್ರಾಳಿ ಲಯನ್ಸ್ ಭವನ ” ಜಯಸಿಂಹ ” ಇಂದ್ರಾಳಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು.
ಶಿಬಿರದ ಉದ್ಘಾಟನೆಯನ್ನು ಯುವ ಉದ್ಯಮಿ ರಾಜಶೇಖರ್ ಶೆಟ್ಟಿ ದೀಪ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು. ನುರಿತ ವೈದ್ಯರಿಂದ ಹಲ್ಲುಗಳ ಸ್ವಚ್ಛತೆ , ಹಾಳಾದ ಹಲ್ಲುಗಳನ್ನು ಕಿತ್ತು ತೆಗೆದು , ರೀಫಿಲ್ಲಿಂಗ್ , ಉಚಿತ ಔಷಧಿ ವಿತರಣೆ , ನೂರಾರು ಶಿಬಿರಾಥಿಗಳು ಭಾಗವಹಿಸಿದರು.
ಮುಖ್ಯ ಅತಿಥಿಗಳಾಗಿ ಜಯಂಟ್ಸ್ ಫೆಡೆರೇಶನ್ ಮಾಜಿ ಅಧ್ಯಕ್ಷರಾದ ಮಧುಸೂದನ್ ಹೇರೂರು , ಡಾ ನಿಶೂ ಸಿಂಗಲ್ , ಜಯಂಟ್ಸ್ ಗ್ರೂಪ್ ಉಡುಪಿ ಅಧ್ಯಕ್ಷರಾದ ಯಶವಂತ್ ಸಾಲಿಯಾನ್ , ಕಾರ್ಯದರ್ಶಿ ವಾದಿರಾಜ್ , ಕೋಶಾಧಿಕಾರಿ ದಿವಾಕರ್ ಪೂಜಾರಿ , ಮಾಜಿ ಅಧ್ಯಕ್ಷರಾದ ದೇವದಾಸ್ ಕಾಮತ್ , ಇಕ್ಬಾಲ್ ಮನ್ನಾ , ಲಿಯೋ ಶೋಭಾ ಶೆಟ್ಟಿ ,ಲಿಯೋ ರೊಪಶ್ರೀ ,ಇತರ ಪಧಾದಿಕಾರಿಗಳು ಉಪಸ್ಥರಿದ್ದರು.
ಲಯನ್ಸ್ ಕ್ಲಬ್ ಇಂದ್ರಾಳಿ ಅಧ್ಯಕ್ಷರಾದ ಲಕ್ಷ್ಮಿಕಾಂತ್ ಬೆಸ್ಕೂರ್ ಸ್ವಾಗತಿಸಿದರು. ಲಯನ್ ರತ್ನಾಕರ್ ಇಂದ್ರಾಳಿ ಕಾರ್ಯಕ್ರಮ ನಿರೂಪಣೆಗೈದರು. ಲಯನ್ ದಿವಾಕರ್ ಶೆಟ್ಟಿ ವಂದಿಸಿದರು.