ಉಡುಪಿ:ಉಡುಪಿ ವಳಕಾಡಿನ ಸಂಯುಕ್ತ ಸರಕಾರಿ ಪ್ರೌಢ ಶಾಲೆಯಲ್ಲಿ, ಮಕ್ಕಳಿಗಾಗಿ ಉಡುಪಿ ಅಂಚೆ ವಿಭಾಗದ ಸಹಯೋಗಿತ್ವದಲ್ಲಿ ಖ್ಯಾತ ಫಿಲಟೇಲಿಸ್ಟ್ ಶ್ರೀ ನಾಗೇಂದ್ರ ರವರ ಅಂಚೆ ಚೀಟಿ ವಸ್ತು ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ಮಾತನಾಡಿ, ಹವ್ಯಾಸಗಳ ರಾಜನಾಗಿರುವ ಅಂಚೆ ಚೀಟಿಗಳು ದೇಶದ ಭವ್ಯ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸುವ ರಾಯಭಾರಿ ಆಗಿವೆ. ಇಂತಹ ಉತ್ತಮ ಹವ್ಯಾಸವನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಉಡುಪಿ ಪ್ರಧಾನ ಅಂಚೆ ಕಚೇರಿಯ ಉಪ ಅಂಚೆ ಪಾಲಕಿ ಹಾಗು ಖ್ಯಾತ ಫಿಲಾಟಲಿಸ್ಟ್ ಕೂಡ ಆಗಿರುವ ಪೂರ್ಣಿಮಾ ಜನಾರ್ಧನ ಸ್ವಾಗತಿಸಿ ವಂದಿಸಿದರು. ಪ್ರಜ್ವಲ್ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸಿದರು.












