ಇನ್ ಸ್ಟಾಗ್ರಾಂ ಬಳಸ್ತಾ ಇರೋ ಮಕ್ಕಳಿಗೆ ಶಾಕ್ :ಇನ್ಮುಂದೆ ಬೇಕೇ ಬೇಕು ಪೋಷಕರ ಅನುಮತಿ

ಇನ್ ಸ್ಟಾಗ್ರಾಂ ಅಂದ್ರೆ ಮಕ್ಕಳಿಂದ ಹಿಡಿದು ಯುವಜನರವರೆಗೂ ಎಲ್ಲರ ಹಾಟ್ ಫೆವರೇಟ್. ಇನ್ಟಾಗ್ರಾಂ ಗೆ ಎಡಿಕ್ಟ್ ಆದವರು ಏನೂ ಕಡಿಮೆ ಇಲ್ಲ.ಮಕ್ಕಳೂ ಕೂಡ ಇನ್ಟಾಗ್ರಾಂ ಗೆ ದಾಸರಾಗಿರುವುದನ್ನು ತಪ್ಪಿಸುವುದೇ ಭಾರೀ ಕಷ್ಟಕರ. ಇದೀಗ ಇನ್ಸ್ಟಾಗ್ರಾಮ್ ತನ್ನ ಪ್ಲಾಟ್ಫಾರ್ಮ್ನಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.

ಇದರ ಪ್ರಕಾರ, 16 ವರ್ಷದೊಳಗಿನ ಮಕ್ಕಳು ಇನ್ನು ಮುಂದೆ ಪೋಷಕರ ಅನುಮತಿ ಇಲ್ಲದೆ ಲೈವ್ಸ್ಟ್ರೀಮ್ ಮಾಡಲು ಅವಕಾಶವಿರುವುದಿಲ್ಲ. ಅಂದ ಹಾಗೆ ಈ ನಿಯಮವನ್ನು ಮಕ್ಕಳ ಸುರಕ್ಷತೆ ಮತ್ತು ಆನ್ಲೈನ್ ಗೌಪ್ಯತೆಯನ್ನು ರಕ್ಷಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂದು ಇನ್ಟಾ ಹೇಳಿಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಯುವ ಪೀಳಿಗೆಯ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇನ್ಸ್ಟಾಗ್ರಾಮ್ ತಿಳಿಸಿದೆ.

ಬೇಕು ಫೋಷಕರ ಅನುಮತಿ:
ಇನ್ಟಾ ಜಾರಿಮಾಡಿದ ಈ ಹೊಸ ಬದಲಾವಣೆಯ ಪ್ರಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರು ಲೈವ್ಸ್ಟ್ರೀಮ್ ಆರಂಭಿಸುವ ಮೊದಲು ಪೋಷಕರಿಂದ ಲಿಖಿತ ಅನುಮತಿ ಪಡೆಯಬೇಕಿದೆ. ಈ ಅನುಮತಿಯನ್ನು ಇನ್ಸ್ಟಾಗ್ರಾಮ್ಗೆ ಸಲ್ಲಿಸಿದ ನಂತರವೇ ಅವರಿಗೆ ಲೈವ್ಸ್ಟ್ರೀಮ್ ಮಾಡುವ ಸೌಲಭ್ಯ ಲಭ್ಯವಾಗಲಿದೆ. ಇದರಿಂದ ಮಕ್ಕಳು ಆನ್ಲೈನ್ನಲ್ಲಿ ಯಾವುದೇ ಅಪಾಯಕಾರಿ ಅಥವಾ ಅನುಚಿತ ವಿಷಯವನ್ನು ಪ್ರಸಾರ ಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಕಂಪನಿ ತಿಳಿಸಿದೆ. ಈ ನಿಯಮದಿಂದ ಒಂದಷ್ಟಾದರೂ ಮಕ್ಕಳ ಇನ್ಟಾಗ್ರಾಂ ಬಳಕೆ ಹತೋಟಿಗೆ ಬರಬಹುದು ಎನ್ನಲಾಗಿದೆ.