ಇಂಡೋನೇಷ್ಯಾದ ಜಖಾರ್ತಾದಲ್ಲಿ ಗಣೋಶೋತ್ಸವ ಆಚರಣೆ

ಉಡುಪಿ: ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಗಣೇಶನ ಹಬ್ಬವನ್ನು ಆಚರಿಸಲಾಗುತ್ತಿದೆ. ಇಂಡೋನೇಷ್ಯಾದ ರಾಜಧಾನಿ ಜಖಾರ್ತಾದಲ್ಲಿ ಐದು ದಿನಗಳ ಕಾಲ ಸಂಭ್ರಮದಿಂದ ಗಣೇಶೋತ್ಸವ ಆಚರಿಸಲಾಯಿತು. ಸಾವಿರಾರು ಭಾರತೀಯರು ಜಕಾರ್ತದಲ್ಲಿ ಉದ್ಯೋಗ ಮಾಡಿಕೊಂಡಿದ್ದು, 2,000ಕ್ಕೂ ಅಧಿಕ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಳೆದ 13 ವರ್ಷಗಳ ಹಿಂದೆ ಗಣೇಶ ಚತುರ್ಥಿಯನ್ನು ಕಾರ್ಕಳ ತಾಲೂಕು ಹೊಸ್ಮಾರು ಮೂಲದ ಸುಧಾಕರ ಶೆಟ್ಟಿಯವರು ಆರಂಭ ಮಾಡಿದ್ದರು. ಭಾರತೀಯರ ಆಚರಣೆಯಲ್ಲಿ ಇಂಡೋನೇಷ್ಯಾದ ಪ್ರಜೆಗಳು ಸುತ್ತಮುತ್ತಲ ದೇಶಗಳಿಂದ ಉದ್ಯೋಗ ನಿಮಿತ್ತ ಬಂದವರು ಭಾಗಿಯಾದರು.

Oplus_0

ಗಣೇಶ ಮೂರ್ತಿಯನ್ನು ಭಾರತದಿಂದ ವಿಮಾನ ಮೂಲಕ ತರಿಸಿಕೊಂಡು ಅದ್ದೂರಿಯಾಗಿ ಹಬ್ಬ ಆಚರಿಸಲಾಯಿತು. ಇಂಡೋನೇಷಿಯಾದ ಭಾರತೀಯ ರಾಯಭಾರಿ ಸಂದೀಪ್ ಚಕ್ರವರ್ತಿ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಗಣಪತಿ ಮೂರ್ತಿಗೆ ಮಹಾಪೂಜೆ, ಹೋಮ ಹವನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಭಾಂಗಣದಲ್ಲಿ ನಡೆಸಲಾಯಿತು. ನಂತರ ಅದ್ದೂರಿ ಮೆರವಣಿಗೆ ಮಾಡಿ ಗಣಪತಿ ಮೂರ್ತಿಯನ್ನು ವಿಸರ್ಜಿಸುವ ವಿಧಿಯನ್ನು ಕೂಡ ನೆರವೇರಿಸಲಾಯಿತು.

Oplus_0