ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಇಂದು ಶ್ರೀಮನ್ಮಹಾರಥೋತ್ಸವ

ಬ್ರಹ್ಮಾವರ: ತಾಲೂಕಿನ ಬ್ರಹ್ಮಾವರ ಆರೂರು ಮಹತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇಂದು ಶ್ರೀ ಮನ್ಮಹಾರಥೋತ್ಸವ ನಡೆಯಲಿದೆ.

ಮೇ.12 ಆದಿತ್ಯವಾರ ನಿತ್ಯಬಲಿ, ಮಹಾಪೂಜೆ, (ಮಧ್ಯಾಹ್ನ 12.30ಕ್ಕೆ) ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸಾಯಂಕಾಲ ಶ್ರೀ ಮನ್ಮಹಾರಥೋತ್ಸವ, ಭೂತಬಲಿ ಶಯನೋತ್ಸವ, ಕವಾಟ ಬಂಧನ

ಮೇ.13 ಸೋಮವಾರ ತುಲಾಭಾರ ಸೇವೆ, ಕವಾಟೋದ್ಘಾಟನೆ, ಭಕ್ತಾದಿಗಳ ತುಲಾರೋಹಣ, ನಿತ್ಯಬಲಿ, ವಸಂತ ಸಮಾರಾಧನೆ ರಾತ್ರಿ ಅವಭ್ರತ ಸ್ನಾನ, ಕಟ್ಟೆಪೂಜೆ ಪೂರ್ಣಾಹುತಿ.

ಮೇ.14ನೇ ಮಂಗಳವಾರ ಸಂಪ್ರೋಕ್ಷಣೆ, ಕುಂಭಾಭಿಷೇಕ, ಫಲ-ಮಂತ್ರಾಕ್ಷತೆ ಇತ್ಯಾದಿ, ಮಧ್ಯಾಹ್ನ ಸಂತರ್ಪಣೆ ರಾತ್ರಿ ಮಾರಿಪೂಜೆ ನಡೆಯಲಿದೆ.
ಮೇ.12 ಆದಿತ್ಯವಾರ ಮಧ್ಯಾಹ್ನ ಗಂಟೆ 12-30ಕ್ಕೆ ತೆಂಕು ಹಾಗೂ ಬಡಗು ಕಲಾವಿದರಿಂದ ಗಾನ ವೈಭವ ಜರಗಲಿವೆ ಎಂದು ಪ್ರಕಟಣೆ ತಿಳಿಸಿದೆ.