ಆತ್ರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆ: ಲಯನ್ ಜಗದೀಶ್ ಆಚಾರ್ಯರಿಂದ ಧ್ವಜಾರೋಹಣ

ಆತ್ರಾಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ಇಂದು 75 ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು SDMC ಉಪಾಧ್ಯಕ್ಷೆ ಶ್ರೀಮತಿ ಕೀರ್ತಿಯವರು ವಹಿಸಿಕೊಂಡಿದ್ದರು.

ಧ್ವಜಾರೋಹಣವನ್ನು ಮಾಡಿದ ಲಯನ್ಸ್ ಕ್ಲಬ್ ಚೇತನ ಉಡುಪಿಯ ಅಧ್ಯಕ್ಷ ಲಯನ್ ಜಗದೀಶ್ ಆಚಾರ್ಯರವರು ಪ್ರಜಾಪ್ರಭುತ್ವದಿನದ ಮಹತ್ವ ಮತ್ತು ದೇಶಕ್ಕೆ ಅದರ ಅಗತ್ಯತೆಯನ್ನು ತಿಳಿಸಿದರು. ಜತೆಗೆ ಲಯನ್ಸ್ ಕ್ಲಬ್ ಚೇತನದ ಸೇವಾ ಚಟುವಟಿಕೆಗಳನ್ನು ತಿಳಿಸುತ್ತಾ ಆತ್ರಾಡಿ ಶಾಲೆಯಲ್ಲಿ ಚೇತನ ಕ್ಲಬ್ ಮಾಡಿರುವ ಕಾರ್ಯಕ್ರಮಗಳನ್ನು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಚೇತನಾದ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಸದಸ್ಯರಾದ ರತ್ನಾಕರ್ ಶೆಟ್ಟಿ, ಮುರಳೀಧರ ಹಾಲಂಬಿ,ಹಳೆ ವಿದ್ಯಾರ್ಥಿಗಳಾದ ಸತ್ಯಾನಂದ ನಾಯಕ್, ಇಸ್ಮಾಯಿಲ್ ಆತ್ರಾಡಿ, ಅಬ್ದುಲ್ ರಹಿಮಾನ್, ದಿನೇಶ್, ಇರ್ಫಾನ್, ಸುಲೈಮಾನ್, SDMC ಸದಸ್ಯರಾದ ರಾಜೇಶ್ವರಿ, ರೇಖಾ ಮತ್ತು ಶಿಕ್ಷಕಿಯರಾದ ಸರಸ್ವತಿ, ಜ್ಯೋತಿ, ಶಬನಾ ಪರ್ವೀನ್, ಸುಹಾಸಿನಿ, ವಿಮಲಾ ,ಅಂಗನವಾಡಿ ಕೇಂದ್ರದ ಜಯಂತಿ, ರೂಪ ಮತ್ತು ಮಕ್ಕಳ ಪೋಷಕರು, ಉಪಸ್ಥಿತರಿದ್ದರು.