ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪಣೆ: ನಾಳೆ ಉಡುಪಿಯಲ್ಲಿ ಮೂರು ಬಸ್ಸುಗಳಿಂದ ಉಚಿತ ಸೇವೆ

ಉಡುಪಿ: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪಣೆಯ ಅಂಗವಾಗಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಸಹ ವಿವಿಧ ಸಂಘಟನೆಗಳು ವಿವಿಧ ರೀತಿಯಲ್ಲಿ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದು, ಹಾಗೆಯೇ ನಾಳೆ ಉಡುಪಿಯಿಂದ ಹೆಬ್ರಿಗೆ ತೆರಳುವ ಎಸ್ ಆರ್ ಎಮ್, ಎಸ್ ಡಿ ಎಮ್, ಮುಟ್ಲುಪಾಡಿಯಿಂದ ಉಡುಪಿಗೆ ತೆರಳುವ ಎಸ್ ಎಮ್ ಎಮ್ ಎಸ್ ಬಸ್ಸಿನವರು ದಿನವಿಡೀ ಉಚಿತ ಪ್ರಯಾಣವನ್ನು ನಾಗರಿಕರಿಗೆ ಒದಗಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.