ಅಯೋಧ್ಯೆಯಲ್ಲಿ ರಾಮ‌ಲಲ್ಲಾ ಪ್ರತಿಷ್ಠೆ: ಕೊಡವೂರಿನಲ್ಲಿ ದೀಪೋತ್ಸವ

ಕೊಡವೂರು: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಪ್ರಧಾನ ಅರ್ಚಕ ಪ್ರಸಾದ್ ಭಟ್ ಅವರು ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸಾಧು ಸಾಲ್ಯಾನ್, ಸದಸ್ಯರಾದ ಸುಧೀರ್ ರಾವ್ ಕೊಡವೂರು, ಪೂರ್ಣಿಮಾ ಜನಾರ್ದನ್ ಗೋವಿಂದ ಐತಾಳ್, ಉಮೇಶ್ ರಾವ್, ವಾಸುದೇವ ಉಪಾಧ್ಯಾಯ, ಕಾಳು ಸೇರಿಗಾರ ಮತ್ತು ಊರಿನ ಹತ್ತು ಸಮಸ್ತರು ದೀಪವನ್ನು ಹಚ್ಚಿ ದೀಪೋತ್ಸವವನ್ನು ಆಚರಿಸಿದರು.