ಉಡುಪಿ: ಇಂದು ವೈಕುಂಠ ಏಕಾದಶಿ. ನಾಡಿನಾದ್ಯಂತ ಅತ್ಯಂತ ವೈಭವದಿಂದ ಶ್ರೀನಿವಾಸ ದೇವರ ಆರಾಧನೆ ಮಾಡಲಾಗುತ್ತಿದೆ. ಇದೀಗ ದೇಶ ಮಾತ್ರವಲ್ಲ ವಿದೇಶದಲ್ಲೂ ವೈಕುಂಠ ಏಕಾದಶಿಯ ಕಲರವ ಕೇಳಿ ಬರುತ್ತಿದೆ. ಅಮೆರಿಕಾದ ಫಿನಿಕ್ಸ್ ನಲ್ಲಿರುವ ಶ್ರೀ ಪುತ್ತಿಗೆ ಮಠದ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಈ ಹಬ್ಬದ ಪ್ರಯುಕ್ತ ಶ್ರೀನಿವಾಸ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ.ಪೂಜ್ಯ ಪುತ್ತಿಗೆ ಶ್ರೀಪಾದರು ೨೦೦೦ನೇ ಇಸವಿಯಲ್ಲಿ ದೇಗುಲವನ್ನು ಅರ್ಪಿಸಿದ್ದು ಇದು ಶ್ರೀಪಾದರು ವಿದೇಶದಲ್ಲಿ ಸ್ಥಾಪಿಸಿದ ಮೊದಲ ದೇವಾಲಯವಾಗಿರುತ್ತದೆ. ಕ್ಷೇತ್ರದ ಆಸು ಪಾಸು ಇರುವ ಸಾವಿರಾರು ಭಾರತೀಯರು ವೈಕುಂಠ ಏಕಾದಶಿಯಲ್ಲಿ ಭಾಗಿಯಾಗಿದ್ದಾರೆ.