ಅಬಕಾರಿ ಅಕ್ರಮ ತಡೆಗಟ್ಟಲು ಕಂಟ್ರೋಲ್ ರೂಂ ಸ್ಥಾಪನೆ.

ಉಡುಪಿ: ಲೋಕಸಭಾ ಚುನಾವಣೆಯು ಮುಂದಿನ ದಿನಗಳಲ್ಲಿ ನಡೆಯಲಿದ್ದು, ಮತದಾರರನ್ನು ಸೆಳೆಯಲು ನಕಲಿ, ಕಳಪೆ ಮಟ್ಟದ ಮದ್ಯೆ, ಕಳ್ಳಭಟ್ಟಿ ತಯಾರಿಸಿ ಸಾಗಾಣಿಕೆ, ಶೇಖರಣೆ ಮಾಡಿ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿತರಿಸುವ ಸಾಧ್ಯತೆ ಇದ್ದು, ಇವುಗಳ ಸೇವನೆಯಿಂದ ಪಾನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಿನ್ನೆಲೆ ಹಾಗೂ ಸಮಾಜಘಾತುಕ ಶಕ್ತಿಗಳು ಅಕ್ರಮವಾಗಿ ಆದಾಯ ಗಳಿಸಲು ತೆರಿಗೆ ಪಾವತಿಸಿರುವ ಮದ್ಯವನ್ನು ಖರೀದಿಸಿ, ದಾಸ್ತಾನು ಇಟ್ಟು ಚುನಾವಣೆಯ ಮದ್ಯಮಾರಾಟ ನಿಷೇಧಿಸಿ ಆದೇಶಿಸಿದ ದಿನಗಳಲ್ಲಿ (ಒಣದಿವಸ) ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆ ಇದ್ದು, ಇವುಗಳನ್ನು ತಡೆಗಟ್ಟಿ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಸಾರ್ವಜನಿಕರು ಮೇಲ್ಕಾಣಿಸಿದ ಕಾನೂನು ಬಾಹಿರ ಅಕ್ರಮಗಳನ್ನು ಕೈಗೊಂಡ ಸಂದರ್ಭದಲ್ಲಿ ಟೋಲ್ ಫ್ರೀ ಸಂಖ್ಯೆ 1800 4250 732 ಗೆ ಕರೆಮಾಡಿ ಮಾಹಿತಿ ನೀಡಬಹುದಾಗಿದೆ. ಅಲ್ಲದೇ ಉಡುಪಿ ತಾಲೂಕು ಕಂಟ್ರೋಲ್ ರೂಂ. ದೂ.ಸಂಖ್ಯೆ: 0820-2532732,ಕುಂದಾಪುರ ತಾಲೂಕು ಕಂಟ್ರೋಲ್ ರೂಂ. ದೂ.ಸಂಖ್ಯೆ: 08254-200902, ಕಾರ್ಕಳ ತಾಲೂಕು ಕಂಟ್ರೋಲ್ ರೂಂ. ದೂ.ಸಂಖ್ಯೆ: 08258-298865 ಹಾಗೂ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಮೊ.ನಂ: 9449597104, ಉಡುಪಿ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಮೊ.ನಂ. 9538721125, ಕುಂದಾಪುರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಮೊ.ನಂ: 9900681914, ಉಡುಪಿ ಉಪವಿಭಾಗದ ಅಬಕಾರಿ ನಿರೀಕ್ಷಕರು ಮೊ.ನಂ: 9845412095,, ಕುಂದಾಪುರ ಉಪವಿಭಾಗದ ಅಬಕಾರಿ ನಿರೀಕ್ಷಕರು ಮೊ.ನಂ: 7676269418, ಉಡುಪಿ ವಲಯ -1 ರ ಅಬಕಾರಿ ನಿರೀಕ್ಷಕರು ಮೊ.ನಂ: 9845412095, ಉಡುಪಿ ವಲಯ -2 ರ ಅಬಕಾರಿ ನಿರೀಕ್ಷಕರು ಮೊ.ನಂ: 9902745874, ಕಾರ್ಕಳ ವಲಯದ ಅಬಕಾರಿ ನಿರೀಕ್ಷಕರು ಮೊ.ನಂ: 9902729126, ಕುಂದಾಪುರ ವಲಯದ ಅಬಕಾರಿ ನಿರೀಕ್ಷಕರು ಮೊ.ನಂ: 9632438760 ಹಾಗೂ ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರು ಮೊ.ನಂ: 7019149630 ಗೆ ಮಾಹಿತಿ ನೀಡಬಹುದಾಗಿದೆ ಎಂದು ಅಬಕಾರಿ ಉಪ ಆಯುಕ್ತರ ಪ್ರಕಟಣೆ ತಿಳಿಸಿದೆ.