ಉಡುಪಿ: ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದ್ದು, ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

ವಾಹನ ಸವಾರರು ಉಡುಪಿಗೆ ಪ್ರಯಾಣಿಸುವಾಗ ಅಂಬಲಪಾಡಿಯಿಂದ ಸರ್ವಿಸ್ ರಸ್ತೆ ಮೂಲಕ ಅದಿವುಡುಪಿ ಕರಾವಳಿ ಜಂಕ್ಷನ್ ಮಾರ್ಗವಾಗಿ ಉಡುಪಿಗೆ ತೆರಳಬೇಕು. ಹಾಗೆಯೇ ಉಡುಪಿಯಿಂದ ಅಂಬಲಪಾಡಿಗೆ ಪ್ರಯಾಣಿಸುವಾಗ ಬ್ರಹ್ಮಗಿರಿಯಿಂದ ಅಂಬಲಪಾಡಿ ಸರ್ವಿಸ್ ರಸ್ತೆಯ ಮೂಲಕ ಕಿನ್ನಿಮುಲ್ಕಿ ಸ್ವಾಗತ ಗೋಪುರ ಬಳಿಯಿಂದ ‘ಯು’ ಟರ್ನ್ ಮೂಲಕ ಅಂಬಲಪಾಡಿಗೆ ಹೋಗಬೇಕು.












