ಅನೈತಿಕ ಸಂಬಂಧ: ಪತ್ನಿಯನ್ನು ಕೊಂದು ಮನೆ ಬೆಡ್ರೂಮ್’ನ ಕೆಳಗೆ ಶವ ಹೂತ ಪತಿ!

ಉತ್ತರ ಪ್ರದೇಶ: ಬಹ್ರೈಚ್ ಜಿಲ್ಲೆಯಲ್ಲಿ ಅನೈತಿಕ ಸಂಬಂಧ(Immoral relationship) ಹಿನ್ನೆಲೆ ತನ್ನ ಪತ್ನಿ ಇನ್ನೊಬ್ಬರ ಜೊತೆ ಖಾಸಗಿ ಕ್ಷಣದಲ್ಲಿ ಇರೋದನ್ನು ನೋಡಿದ ಪತಿ, ಆಕೆಯನ್ನು ಕೊಂದು ಮನೆಯ ಬೆಡ್​ರೂಂನಲ್ಲಿಯೇ ಶವ ಹೂತು, ಅದರ ಮೇಲೆಯೇ 12 ದಿನ ಮಲಗಿದ್ದಾನೆ. ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು 48 ವರ್ಷದ ಆರೋಪಿ ಪತಿಯನ್ನು ಬಂಧಿಸಲಾಗಿದೆ ಎಂದು ಗುರುವಾರ(ಅ. 23) ವರದಿಯಾಗಿದೆ.

ಅಹತಾ ಗ್ರಾಮದ ಹರಿಕಿಶನ್ ಎಂಬ ಆರೋಪಿಯನ್ನು ಮಂಗಳವಾರ ನೆರೆಯ ಬಾರಾಬಂಕಿ ಜಿಲ್ಲೆಯ ದುರ್ಗಾಪುರ ತಪೇಸಿ ಗ್ರಾಮದಲ್ಲಿ ಬಂಧಿಸಲಾಗಿದೆ. ಆರೋಪಿ ಹರಿಯಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ, ಇತ್ತೀಚೆಗೆ ಅ. 06ರಂದು ಮನೆಗೆ ಹಿಂದಿರುಗಿದ್ದನು. ಅಂದಿನಿಂದ ಅವರ ಪತ್ನಿ ಫೂಲಾ ದೇವಿ(45) ಕಾಣೆಯಾಗಿದ್ದರು. ಅ. 13ರಂದು ಆಕೆಯ ಸಹೋದರ ನಾಪತ್ತೆ ದೂರು ದಾಖಲಿಸಿದ್ದನು.

ದೂರು ದಾಖಲಿಸಿದ ಬಳಿಕ ಕಳೆದ ಶುಕ್ರವಾರ ಆಕೆಯ ಸಹೋದರ ಆರೋಪಿಯ ಮನೆಗೆ ತೆಳಿದ್ದಾಗ ಬೆಡ್​​ರೂಂ ಕೆಳೆಗೆ ಮಣ್ಣು ಅಗೆದಿದ್ದನ್ನು ಗಮನಿಸಿ, ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿ ಅಗೆದಾಗ, ಫೂಲಾ ದೇವಿಯ ಕೊಳೆತ ದೇಹ ಸುಮಾರು ಐದರಿಂದ ಆರು ಅಡಿ ಆಳದಲ್ಲಿ ಪತ್ತೆಯಾಗಿದೆ. ಬಳಿಕ ನಾಪತ್ತೆ ಬಳಿಕ ಪ್ರಕರಣವನ್ನು ಕೊಲೆ ಕೇಸ್​ ಆಗಿ ಪರಿವರ್ತಿಸಿ ಆರೋಪಿ ಪತಿಯನ್ನು ಬಂಧಿಸಿದ್ದಾರೆ.

ಈ ಕುರಿತು ಪಿಟಿಐಗೆ ಮಾಹಿತಿ ನೀಡಿರುವ ಎಎಸ್​ಪಿ ರಮಾನಂದ ಪ್ರಸಾದ್ ಕುಶ್ವಾಹ, ಆರೋಪಿ ಪತಿ ಹರಿಕಿಶನ್ ಹರಿಯಾಣದಿಂದ ಮನೆಗೆ ಹಿಂದಿರುಗಿದಾಗ, ಪತ್ನಿ ಫೂಲಾ ದೇವಿ ಅದೇ ಗ್ರಾಮದ ಗುಡ್ಡು ಎಂಬಾತನೊಂದಿಗೆ ಅಕ್ರಮ ಸಂಬಂಧದಲ್ಲಿರುವುನ್ನು ನೋಡಿದ್ದಾನೆ. ಇದರಿಂದ ಕೋಪಗೊಂಡ ಆಕೆಯನ್ನು ಕೊಂದು ತನ್ನ ಬೆಡ್​ರೂಂನಲ್ಲಿಯೇ ಶವ ಹೂತು ಹಾಕಿದ್ದನು. ಆರೋಪಿಯನ್ನು ಬಂಧಿಸಲಾಗಿದ್ದು, ಕೋರ್ಟ್​ಗೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.