ಉಡುಪಿ: ದೇವಸ್ಥಾನದಲ್ಲಿ ಸರಗಳ್ಳತನ -ಕಳ್ಳಿಯರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ಉಡುಪಿ: ಅಂಬಲಪಾಡಿ ದೇವಸ್ಥಾನದಲ್ಲಿ ನವರಾತ್ರಿಯ ಸಡಗರದ ನಡುವೆ ಮಹಿಳೆಯರಿಬ್ಬರು ವೃದ್ಧೆಯೊಬ್ಬರ ಚಿನ್ನದ ಸರವನ್ನು ಚಾಣಾಕ್ಷತನದಿಂದ ಎಗರಿಸಿದ್ದಾರೆ. ಸಂಶಯಗೊಂಡ ವೃದ್ಧೆ, ಮಹಿಳೆಯರಿಬ್ಬರ ಮೇಲೆ ಸಂಶಯ ಇದೆ ಎಂದು ಹೇಳಿದ್ದಾರೆ. ನಂತರ ಮಹಿಳೆಯರನ್ನು ಪರಿಶೀಲಿಸಿದಾಗ ಸರ ಸಿಕ್ಕಿದೆ. ವಿಷಯ ತಿಳಿಯುತ್ತಿದ್ದಂತೆ ಕೋಪಗೊಂಡ ಮಹಿಳೆಯರು ಆಪಾದಿತ ಮಹಿಳೆಯರಿಗೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಬಳಿಕ ಪೆಟ್ಟು ತಿಂದ ಮಹಿಳೆಯರನ್ನು ಪೊಲೀಸರಿಗೆ ಒಪ್ಪಿಸಲಾಯಿತು.ಈ ಸಂದರ್ಭದಲ್ಲಿ ಅನಾರೋಗ್ಯದ ನೆಪ ಹೇಳಿ ಬಚಾವಾಗಲು ಯತ್ನಿಸಿದರು. ಸ್ಥಳಕ್ಕೆ ಬಂದ ಸಮಾಜ ಸೇವಕ ವಿಶು ಶೆಟ್ಟಿ, ಆಪಾದಿತ ಮಹಿಳೆಯರನ್ನು ತಮ್ಮ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಪೋಲಿಸರಿಗೆ ಒಪ್ಪಿಸಿದರು. ಕಳ್ಳಿಯರು ತಮಿಳುನಾಡು ಮೂಲದವರು ಎಂದು ತಿಳಿದುಬಂದಿದೆ.