ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘವು ವಿಶ್ವದಲ್ಲಿ ಸನಾತನ ಧರ್ಮದ ಮಹತ್ವ ಗೌರವವನ್ನು ಹೆಚ್ಚಿಸಿದೆ ಮತ್ತು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದಂತೆ ತ್ಯಾಗ, ಸೇವೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದ್ದಾರೆ.
ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ವೀಡಿಯೋ ಮೂಲಕ ಸಂದೇಶ ನೀಡಿದ ಶ್ರೀಪಾದರು, ಆರೆಸ್ಸೆಸ್ ಶತಮಾನೋತ್ಸವ ಆಚರಿಸುತ್ತಿದೆ. ವ್ಯಕ್ತಿಗೆ ವರ್ಷ ನೂರಾದರೆ ದುರ್ಬಲ ಆದಂತೆ. ಆದರೆ ಸಂಸ್ಥೆಗೆ 100 ವರ್ಷವಾದರೆ ಇನ್ನಷ್ಟು ಪ್ರಬಲವಾಗಿ ಬೆಳೆಯುತ್ತಿದೆ ಎಂದರ್ಥ. ಈ ದೃಷ್ಟಿಯಲ್ಲಿ ಆರೆಸ್ಸೆಸ್ ಶತಮಾನೋತ್ಸವ ಆಚರಿಸುತ್ತಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ ಸಂಘ ಕಾರ್ಯನಿರ್ವಹಿಸುತ್ತಿದೆ. ಭಗವದ್ಗೀತೆ ನಿರೂಪಿಸಿದ ಜೀವನ ಮೌಲ್ಯ ಅಳವಡಿಸಿಕೊಂಡು ಸಂಘ ನಡೆಯುತ್ತಿದೆ. ಸಂಘದ ಮೂಲಕ ಇನ್ನಷ್ಟು ದೇಶಸೇವೆ ನಡೆಯಲಿ ಎಂದು ತಮ್ಮ ವೀಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು


















