ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕಚೇರಿಯ ನಿವೃತ್ತ ಆಡಳಿತಾಧಿಕಾರಿ ಎಂ. ಚಂದ್ರಶೇಖರ್ ಶೆಟ್ಟಿ (63) ಇಂದು ಹೃದಯಾಘಾತದಿಂದ (ಕೊರೊನಾ) ಸ್ವಗೃಹದಲ್ಲಿ ನಿಧನರಾದರು.
ನಿವೃತ್ತಿಯ ಅನಂತರ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಇವರು ಮೂಲತ: ಕೊಕ್ಕಣೆ೯ ಬೈದೆಬೆಟ್ಟು ಸಮೀಪದ ಮೈಯಾರು ಮಕ್ಕಿಯವರು. ಪ್ರಸ್ತುತ ಉಡುಪಿಯಲ್ಲಿ ವಾಸವಾಗಿದ್ದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.