ಉಡುಪಿ: ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಬರೆದಿರುವ “ಸನ್ ರೈಸ್ ಓವರ್ ಅಯೋಧ್ಯಾ” ಎಂಬ ಹಿಂದೂ ವಿರೋಧಿ ಪುಸ್ತಕವನ್ನು ಬಿಡುಗಡೆಗೊಳಿಸಲು ಅವಕಾಶ ನೀಡಬಾರದು. ಅದಕ್ಕೆ ನಿಷೇಧ ಹೇರಬೇಕೆಂದು ಜಯರಾಮ್ ಅಂಬೇಕಲ್ಲು ನೇತೃತ್ವದ ರಾಮ್ ಸೇನಾ ಉಡುಪಿ ಜಿಲ್ಲಾ ಘಟಕದಿಂದ ಕೇಂದ್ರ ಗ್ರಹ ಸಚಿವರಿಗೆ ಉಡುಪಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಇಂದು ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಜಯರಾಮ್ ಅಂಬೇಕಲ್ಲು, ಮುಖಂಡರಾದ ಶರತ್ ಮಣಿಪಾಲ, ಸುದರ್ಶನ್ ಕಪ್ಪೆಟ್ಟು, ಸಂದೀಪ್ ಮೂಡುಬೆಳ್ಳೆ, ಗಗನ್ ಪೂಜಾರಿ, ರಾಕೇಶ್ ನಿಟ್ಟೂರು, ಹರೀಶ್ ಪೂಜಾರಿ, ನಿತಿನ್, ಈಶ್ವರ್, ವಿಕ್ರಮ್ ನಿಟ್ಟೂರು ಮೊದಲಾದವರು ಉಪಸ್ಥಿತರಿದ್ದರು.