ಉಡುಪಿ: ಉಡುಪಿಯ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಉತ್ತರ ಭಾರತ ಪ್ರವಾಸದಲ್ಲಿದ್ದಾರೆ. ವರ್ಷಾವಧಿ ತೀರ್ಥಕ್ಷೇತ್ರ ಪ್ರವಾಸದಲ್ಲಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬುಧವಾರ ರಾತ್ರಿ ಕಾಶಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಗಂಗಾ ತೀರದಲ್ಲಿ ನಡೆದ ಗಂಗಾರತಿಯಲ್ಲಿ ಪಾಲ್ಗೊಂಡಿದ್ದಾರೆ. ತಾವು ಸ್ವತಃ ಗಂಗಾರತಿಗೈದಿದ್ದಾರೆ. ಸ್ಥಳೀಯಾಡಳಿತವು ಪೇಜಾವರ ಶ್ರೀಗಳ ಗಂಗಾರತಿಗೆ ವ್ಯವಸ್ಥೆ ಕಲ್ಪಿಸಿತ್ತು. ಪೇಜಾವರ ಶ್ರೀಗಳು ಉತ್ತರ ಭಾರತದ ವಿವಿಧ ಕ್ಷೇತ್ರಗಳಿಗೆ ಈ ವೇಳೆ ಭೇಟಿ ನೀಡಲಿದ್ದಾರೆ.


















