ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಮಣಿಪಾಲದಲ್ಲಿ ನೂತನ ಜನರೇಟರ್ ಚಾಲನೆ

ಉಡುಪಿ:ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನೂತನವಾಗಿ ಅಳವಡಿಸಿದ ಜನರೇಟರ್ ನ  ಚಾಲನೆಯನ್ನು ಪರಿಕ ದೇವಸ್ಥಾನದ ಆಡಳಿತ ಮುಕ್ತೇಶ್ವರ, ವಿಘ್ನೇಶ್ವರ ಸಭಾಭವನ ಪರ್ಕಳ ಇದರ ಅಧ್ಯಕ್ಷರಾದ ಶ್ರೀ ದಿಲೀಪ್ ಹೆಗ್ಡೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.   

ಈ ಸಂದರ್ಭದಲ್ಲಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟನ ಅಧ್ಯಕ್ಷ ದಿನೇಶ್ ಪ್ರಭು, ಆಡಳಿತ ಮೊಕ್ತೇಸರ ಸುಭಾಕರ ಸಾಮಂತ್, ಉಪಾಧ್ಯಕ್ಷ ಹೆರ್ಗ ಪುರುಷೋತ್ತಮ ಪ್ರಭು, ಜೊತೆ ಕಾರ್ಯದರ್ಶಿ ಅಶೋಕ್ ಸಾಮಂತ್, ಕೋಶಾಧಿಕಾರಿ ಶ್ರೀಕಾಂತ್ ಪ್ರಭು, ಟ್ರಸ್ಟಿಗಳಾದ ಕೃಷ್ಣರಾಯ ಪಾಟೀಲ್ ಸಂದೇಶ ಪ್ರಭು ಸ್ಥಳೀಯರಾದ ಮನೋಹರ್ ಪ್ರಭು ದಯಾನಂದ ಪಾಟೀಲ್ ಚಂದ್ರಕಾಂತ ಪ್ರಭು ರಾಜೇಶ್ ಪಾಟೀಲ್ ದತ್ತಾತ್ರೇಯ ಪ್ರಭು ಎಸ್ ಮಂಜುನಾಥ್ ಪ್ರಭು ಇನ್ನಿತರರು ಉಪಸ್ಥಿತರಿದ್ದರು.