ಉಡುಪಿ: ನಗರದ ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಮಳಿಗೆಯಲ್ಲಿ ಸೆ.30ರವರೆಗೆ ಪ್ರಪಥಮ ಬಾರಿಗೆ ಹಮ್ಮಿಕೊಳ್ಳಲಾದ ಹೆರಿಟೇಜ್ ಕಲಾತ್ಮಕ ಚಿನ್ನಾಭರಣಗಳ ಸಂಗ್ರಹಗಳೊಂದಿಗೆ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬುಧವಾರ ಚಾಲನೆ ದೊರೆತಿದೆ.
ಅಜೆಕಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ವಿದ್ಯಾ ಪೈ ಹೆರಿಟೇಜ್ ಕಲಾತ್ಮಕ ಚಿನ್ನಾಭರಣಗಳನ್ನು ಅನಾವರಣಗೊಳಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರೂಪದರ್ಶಿಗಳಾದ ಅನುರಾಧ,ಸುಮಾ ಆರ್, ಸ್ಪರ್ಶ ಜೈನ್ ಹಾಗೂ ಸಮೀಕ್ಷಾ ಕ್ಯಾಟ್ವಾಕ್ ಮೂಲಕ ಹೆಜ್ಜೆ ಹಾಕಿದರು.
ಈ ಸಂದರ್ಭದಲ್ಲಿ ಉಡುಪಿ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಜಿಆರ್ ಎಂ ರಾಘವೇಂದ್ರ ನಾಯಕ್, ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು.
ಆರ್ ಜೆ ಎರಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಹೆರಿಟೇಜ್ ಚಿನ್ನಾಭರಣಗಳ ಪ್ರದರ್ಶನದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹಗಳಿವೆ. ‘ಮೈನ್’ನಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹ, ನವ ವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಾಮಾಣಿಕೃತ ವಜ್ರಾಭರಣಗಳು, ‘ಡಿವೈನ್’ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿ ಬಿಂಬಿಸುವ ಚಿನ್ನಾಭರಣಗಳ ಸಂಗ್ರಹ, ‘ಪ್ರಶಿಯಾ’ದಲ್ಲಿ ರುಬಿ, ಎಮರಾಲ್ಡ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದೆ. ‘ಎಥಿನಿಕ್ಸ್’ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ. ‘ಏರ’ ಅನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹಗಳಿವೆ.
ಸಂಪೂರ್ಣ ಪಾರದರ್ಶಕ, ಉಚಿತ ನಿರ್ವಹಣೆ, ವಿನಿಮಯದಲ್ಲಿ ಶೂನ್ಯ ಕಡಿತ, ಬೈ ಬ್ಯಾಕ್ ಗ್ಯಾರಂಟಿ, ಉಚಿತ ವಿಮೆ, ಎಲ್ಲಾ ಆಭರಣ ಸಹ ಹಾಲ್ ಮಾರ್ಕ್ ಹೊಂದಿದ್ದು, 28 ರೀತಿಯ ಪರೀಕ್ಷೆ ಮಾಡಿದ ಐಜಿಐ ಮತ್ತು ಜಿಐಏ ಪ್ರಾಮಾಣಿಕೃತ ವಜ್ರಾಭರಣಗಳು, ಮದುವೆ ಖರೀದಿಗಳಿಗಾಗಿ ಮುಂಗಡ ಶೇ.5ರಿಂದ ಪಾವತಿಸುವ ಮೂಲಕ ಆಭರಣಗಳನ್ನು ಕಾಯ್ದಿರಿಸಿ ಮತ್ತು ಚಿನ್ನದ ದರದಲ್ಲಿ ಆಗುವ ಏರಿಳಿತದಿಂದ ಸಂರಕ್ಷಿಸಬಹುದು.
ಈ ಪ್ರದರ್ಶನದಲ್ಲಿ ಹೊಸ ದಾಗಿ ಅನಾವರಣಗೊಂಡ ‘ಎಲಾರ’ ಕಲೆಕ್ಷನ್, ಬ್ರಾಂಡೆಡ್ ವಾಚ್ಗಳಾದ ರಾಡೋ, ಟಿಸ್ಸೋಟ್, ಸಿಕೊ, ಟೈಮಾಕ್ಸ್, ಫೋಝಿಲ್ಗೆ ಶೇ.30ರಷ್ಟು ಕಡಿತ ಇದೆ ಎಂದು ಹಫೀಝ್ ರೆಹಮಾನ್ ತಿಳಿಸಿದ್ದಾರೆ.