ಎಸ್.ಪಿ.ಬಿ. ಸವಿ ನೆನಪು – ಲಯನ್ಸ್ ಗಾಯಕರಿಂದ ಆರ್ಕೆಸ್ಟ್ರಾ

ಉಡುಪಿಯಲ್ಲಿ  ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಇವರಿಗೆ ವಿನೂತನ ರೀತಿಯಲ್ಲಿ ಗೌರವ ಸಮರ್ಪಿಸಲಾಯಿತು, ಉಡುಪಿ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಸದಸ್ಯರಿಂದಲೇ ಎಸ್ ಪಿ ಬಾಲಸುಬ್ರಮಣ್ಯಂ ನವರ ಮಧುರ ಹಾಡುಗಳ ಸವಿ ಸವಿ ನೆನಪು ಎನ್ನುವ ಕಾರ್ಯಕ್ರಮ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು  ಲಯನ್ಸ್  ಜಿಲ್ಲಾ ಗವರ್ನರ್ ಲಯನ್  ಸಪ್ನಾ ಸುರೇಶ್ ಇವರು ನೆರವೇರಿಸಿದರು.ಉಡುಪಿ‌ ಜಿಲ್ಲೆಯ ಲಯನ್ಸ್ ನ ಗಾಯಕರುಗಳೇ ಎಸ್ ಪಿ ಬಾಲಸುಬ್ರಮಣ್ಯಂ ರವರ ಸುಮುಧರ ಹಾಡುಗಳನ್ನು ಹಾಡಿ ಮನರಂಜಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ರಾಜೀವ ಕೋಟ್ಯಾನ್, ದ್ವಿತೀಯ ಉಪ  ಜಿಲ್ಲಾ ಗವರ್ನರ್ ಲಯನ್ ಹರಿಪ್ರಸಾದ್ ರೈ, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಶಾಲಿನಿ ಬಂಗೇರ,  ಲಯನ್ಸ್  ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕರು ಲಯನ್ ರಂಜನ್ ಕಲ್ಕೂರ ಉಡುಪಿ, ಉಡುಪಿ ಲಯನ್ಸ್  ಕ್ಲಬ್ ಇದರ ಅಧ್ಯಕ್ಷರಾದ  ಲಯನ್ ದಿನೇಶ್ ಕಿಣಿ ಇವರೆಲ್ಲರೂ ಉಪಸ್ಥಿತರಿದ್ದರು,