ಉಡುಪಿ: ಜಿಲ್ಲೆಯಾದ್ಯಂತ ಇಂದು (ಸೆ.1) ಕೋವಿಡ್-19 ಲಸಿಕಾ ಮಹಾಮೇಳ ನಡೆಯಲಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ದೊರೆಯಲಿದೆ. ಗ್ರಾಮೀಣ ಮತ್ತು ನಗರ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ 50,000 ಲಸಿಕೆ ಲಭ್ಯವಿದೆ.
ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಲಭ್ಯ.
1. ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ (ಸೇಂಟ್ ಸಿಸಿಲಿ ಶಾಲೆ, ಉಡುಪಿ)
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(300 ಡೋಸ್ ಲಭ್ಯ)
2. ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ (ಮಾಧವ ಕೃಪಾ ಶಾಲೆ, ಮಣಿಪಾಲ)
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(1700 ಡೋಸ್ ಲಭ್ಯ)
3. ವಿಷ್ಣುಮೂರ್ತಿ ದೇವಸ್ಥಾನ ನಿಟ್ಟೂರು ಉಡುಪಿ
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(300 ಡೋಸ್ ಲಭ್ಯ)
4.ದೈವಜ್ಞ ಮಂದಿರ ಒಳಕಾಡು ಶಾಲೆ ಹತ್ತಿರ ಒಳಕಾಡು
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(500 ಡೋಸ್ ಲಭ್ಯ)
5. ಮದರ್ ಆಫ್ ಸೋರೊಸ್ ಚರ್ಚ್ ಕೆ.ಎಮ್ ಮಾರ್ಗ್ ಉಡುಪಿ
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(300 ಡೋಸ್ ಲಭ್ಯ)
6. ಎಫ್.ಪಿ.ಎ.ಐ ಕುಕ್ಕಿಕಟ್ಟೆಯಲ್ಲಿ (ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ)
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(250 ಡೋಸ್ ಲಭ್ಯ)
7. ಹಿರಿಯ ಪ್ರಾಥಮಿಕ ಶಾಲೆ, ಕುಕ್ಕಿಕಟ್ಟೆ
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(150 ಡೋಸ್ ಲಭ್ಯ)
8. ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ, ಉಡುಪಿ
ಕೋವಿಶೀಲ್ಡ್ ಪ್ರಥಮ ಮತ್ತು 2ನೇ ಡೋಸ್-(200 ಡೋಸ್ ಲಭ್ಯ)
1. ಗ್ರಾಮೀಣ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರು ಕೋವಿಡ್-19 ಪ್ರಥಮ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು ಎಂದು ಡಿಎಚ್ ಒ ಡಾ. ನಾಗಭೂಷಣ ಉಡುಪ ಎಚ್. ತಿಳಿಸಿದ್ದಾರೆ.