ಉಡುಪಿ:ತ್ರಿಶಾ ಕ್ಲಾಸಸ್ ನಲ್ಲಿ ಸಿಎ ಫೌಂಡೇಶನ್ ತರಗತಿಗಳು ಆರಂಭ

ಕಟಪಾಡಿ:ಸಿಎ, ಸಿಎಸ್, ಎಂಬಿಎ ಮುಂತಾದ ವೃತ್ತಿಪರ ಕೋರ್ಸ್‌ಗಳಿಗೆ ಕಳೆದ 27 ವರ್ಷಗಳಿಂದ ಉತ್ತಮ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿಎ ಫೌಂಡೇಶನ್ ತರಗತಿಗಳು ಸೆಪ್ಟೆಂಬರ್ 22ರಿಂದ ಆರಂಭವಾಗಲಿವೆ. ವೃತ್ತಿಪರ ಕೋರ್ಸ್‌ಗಳ ಕುರಿತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ತರಬೇತಿಗಳನ್ನು ವಿಶೇಷವಾಗಿ ಆಯೋಜಿಸಲಾಗಿದೆ.

ತರಗತಿಯ ವಿಶೇಷತೆಗಳು ಉಡುಪಿ, ಮಂಗಳೂರು, ಬೆಂಗಳೂರು, ಮುಂಬೈಯ ಪ್ರಸಿದ್ಧ ವಿಷಯ ತಜ್ಞರಿಂದ ತರಬೇತಿ, ಆನ್ಸೆನ್ ತರಬೇತಿಗಳ ಪೂರೈಕೆ, ಅಭ್ಯಾಸಕ್ಕೆ ಪೂರಕವಾಗುವ ಸ್ಟಡಿ ಮೆಟೀರಿಯಲ್ ಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಪರೀಕ್ಷೆಗೆ ಪೂರಕವಾಗುವಂತೆ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸುವ ವಿಧಾನಗಳನ್ನು ತಿಳಿಸಿಕೊಡಲಾಗುವುದು. ತರಬೇತಿಯ ಅಂತ್ಯದಲ್ಲಿ ರಿವಿಷನ್ ಕ್ಲಾಸಸ್ ಮತ್ತು ಮಾದರಿ ಸಿದ್ಧತಾ ಪರೀಕ್ಷೆಗಳನ್ನು ಅಯೋಜಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನಲ್ಲಿ ಸಂಪರ್ಕಿಸಬಹುದು.