ಉಡುಪಿ:ಅಸೋಸಿಯೇಷನ್ ಆಫ್ ಕನ್ಸಲ್ಟಿoಗ್ ಸಿವಿಲ್ ಇಂಜಿನಿಯರ್ಸ್ ಎಂಡ್ ಆರ್ಕಿಟೆಕ್ಟ್ಸ್ (ಎ ಸಿ ಸಿ ಇ ಎ )ಉಡುಪಿ ಇವರ ಪ್ರಾಯೋಜಕತ್ವ ದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸುಬ್ರಹ್ಮಣ್ಯ ನಗರ, ಉಡುಪಿ ಇಲ್ಲಿ ನಿರ್ಮಿಸಿರುವ ಸುಮಾರು 2.50 ಲಕ್ಷ ಮೌಲ್ಯದ ನೂತನ ಶೌಚಾಲಯ ಕಟ್ಟಡದ ಉದ್ಘಾಟನೆ ಯನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಉಮಾ ರವರು ಉದ್ಘಾಟಿಸಿದರು.

ಸರಕಾರಿ ಶಾಲೆ ಉಳಿಯ ಬೇಕಾದರೆ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದಲ್ಲಿ ಏಳಿಗೆ ಸಾಧ್ಯ ಈ ನಿಟ್ಟಿನಲ್ಲಿ ವಿದ್ಯಾಭ್ಯಾಸಕ್ಕೆ ಪೂರಕ ವಾದ ಉತ್ತಮ ಶೌಚಾಲಯ ನಿರ್ಮಿಸಿ ಕೊಟ್ಟ ACCIA ಸಂಸ್ಥೆಗೆ ಶುಭ ಹಾರೈಸಿದರು ,, ಎ ಸಿ ಸಿ ಇ ಎ ಯ ಅಧ್ಯಕ್ಷರಾದ ಯೋಗಿಶ್ಚಂದ್ರ ಧಾರ ರವರು ಅಧ್ಯಕ್ಷತೆ ಯನ್ನು ವಹಿಸಿದ್ದರು.
ಮಾಜಿ ನಗರ ಸಭಾ ಸದಸ್ಯೆ ಜಯಂತಿ ಪೂಜಾರಿ ಯವರು ಸಮಾರಂಭದ ಮುಖ್ಯ ಅತಿಥಿ ಯಾಗಿ ಭಾಗವಹಿಸಿದರು. ಏ ಸಿ ಸಿ ಇ ಎ ಯ ಮಾಜಿ ಅಧ್ಯಕ್ಷ ರಾದ ಪಾಂಡುರಂಗ ಆಚಾರ್ ರವರು ಪ್ರಾಸ್ಥಾವನೆ ಗೈದರು. ಶಾಲಾ ಮುಖ್ಯ ಶಿಕ್ಷಕಿ ಸುಜಾತ ಬಿ. ಸ್ವಾಗತಿಸಿದರು. ಸಂಸ್ಥೆ ಯ ಗೌರವಧ್ಯಕ್ಷ ರಾದ ಶ್ರೀನಾಗೇಶ್ ಹೆಗ್ಡೆ, ಮಾಜಿ ಅಧ್ಯಕ್ಷ ರಾದ ಗೋಪಾಲ್ ಭಟ್ ಹಾಗೂ ಎ ಸಿ ಸಿ ಇ ಎ ಯ ಸದಸ್ಯರುಗಳು, ಶಾಲೆಯ ಹಳೆ ವಿದ್ಯಾರ್ಥಿ ಶ್ರೀ ಪುರಂದರ ಶೆಟ್ಟಿ, ಶಾಲೆಯ ಶಿಕ್ಷಕಿಯರು, ಪೋಷಕರುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ಮಹೇಶ್ ಕಾಮತ್ ವಂದಿಸಿದರು. ಶ್ರೀ ನಿರಂಜನ್ ಭಟ್ ಕಾರ್ಯಕ್ರಮ ವನ್ನು ನಿರೂಪಣೆ ಮಾಡಿದರು.


















