ಉಡುಪಿ: ಉಗ್ರರ ದಾಳಿ ಖಂಡಿಸಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ

ಉಡುಪಿ: ದೆಹಲಿಯಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಉಡುಪಿ ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ನೇತೃತ್ವದಲ್ಲಿ ಉಡುಪಿ ಜಟ್ಕಾ ಸ್ಟ್ಯಾಂಡ್ ಬಳಿ ಇಂದು ಪ್ರತಿಭಟನೆ‌ ನಡೆಸಲಾಯಿತು.ನೂರಾರು ಸಂಖ್ಯೆ ಸೇರಿದ್ದ ವೇದಿಕೆಯ ಕಾರ್ಯಕರ್ತರು ಭಯೋತ್ಪಾದಕರ ದಾಳಿಯನ್ನು‌ ತೀವ್ರವಾಗಿ ಖಂಡಿಸಿದರು.

ವೇದಿಕೆ ಗೋರಕ್ಷಕ್ ಪ್ರಮುಖ್ ಸುನಿಲ್ ಕೆ.ಆರ್. ಮಾತನಾಡಿ, ಭಾರತ ದೇಶವನ್ನು ಇಸ್ಲಾಮಿಕ್ ಮಾಡಬೇಕು ಹಾಗೂ ಕಾಶ್ಮೀರವನ್ನು ನಾಶಗೊಳಿಸುವುದೇ ಭಯೋತ್ಪಾದಕರ ಏಕೈಕ ಉದ್ದೇಶ. ಹಿಂದೂ ಮಂದಿರ ಹಾಗೂ‌ ಹಿಂದೂ ಸಮಾಜವನ್ನು‌ ಗುರಿಯಾಗಿಸಿ ಸ್ಫೋಟ ಮಾಡಬೇಕೆಂಬ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ.

ಇಸ್ಲಾಮಿಕ್ ಭಯೋತ್ಪಾದಕರು ಮಾಡುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಚರ್ಚೆ ಆಗುತ್ತಿಲ್ಲ. ಅವರನ್ನು ರಕ್ಷಣೆ ಮಾಡುವ ಕೆಲಸವನ್ನು ಕೆಲವು ಮಂದಿ ಮಾಡುತ್ತಿದ್ದಾರೆ. ಭಯೋತ್ಪಾದಕ ಕೃತ್ಯಗಳನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ ಎಂದು ದೂರಿದರು. ಇಸ್ಲಾಮಿಕ್ ಭಯೋತ್ಪಾದಕತೆಯನ್ನು‌ ಬುಡಸಮೇತ ಕಿತ್ತು ಹಾಕಬೇಕು. ಇಲ್ಲದಿದ್ದರೆ ನಮ್ಮ ದೇಶದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಿಲ್ಲ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಮುಖ್ ರತ್ನಾಕರ ಅಮೀನ್, ವೇದಿಕೆಯ ಉಮೇಶ್ ನಾಯ್ಕ್ ಸೂಡಾ, ರಾಜೇಶ್ ವಿಠಲ್, ನಿಖಿಲ್ ಮಂಚಿ, ಸುದೀಪ್ ಕಡಿಯಾಳಿ, ಚಿರಾಗ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರ್, ಬಿಜೆಪಿ ಮುಖಂಡರಾದ ಪ್ರಭಾಕರ ಪೂಜಾರಿ, ವಿಜಯ ಕೊಡವೂರು, ಶ್ರೀನಿಧಿ ಹೆಗ್ಡೆ, ಶಿಲ್ಪಾ ಜಿ. ಸುವರ್ಣ, ರೇಷ್ಮಾ ಉದಯ್ ಶೆಟ್ಟಿ, ವೀಣಾ ಎಸ್. ಶೆಟ್ಟಿ ಮೊದಲಾದವರು ಇದ್ದರು.