ಉಡುಪಿ: ಉಡುಪಿ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ತಾಲೂಕಿನ ಒಟ್ಟು 16 ಗ್ರಾಪಂಗಳ ಪೈಕಿ 8 ಗ್ರಾಪಂಗಳನ್ನು ತನ್ನ ತೆಕ್ಕಿಗೆ ಹಾಕಿಕೊಂಡಿದ್ದು, ನಾಲ್ಕು ಗ್ರಾಪಂಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಎರಡು ಗ್ರಾಪಂಗಳಲ್ಲಿ ಅತಂತ್ರ ಸ್ಥಿತಿಯಿದ್ದು, ಒಂದು ಗ್ರಾಪಂನಲ್ಲಿ ಸಮಬಲ ಹೋರಾಟ ಇದೆ. ಒಂದು ಗ್ರಾಪಂನ ವಿವರ ಅಪೂರ್ಣವಾಗಿದೆ.
ಪೆರ್ಡೂರು ಗ್ರಾಪಂ 28 ವಾರ್ಡ್ ಗಳ ಪೈಕಿ ಬಿಜೆಪಿ 12, ಕಾಂಗ್ರೆಸ್ 15 ಹಾಗೂ 1 ವಾರ್ಡ್ ನಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ.
80ನೇ ಬಡಗುಬೆಟ್ಟು ಗ್ರಾಪಂ 24 ವಾರ್ಡ್ ಗಳ ಪೈಕಿ 22 ಬಿಜೆಪಿ, 1 ಕಾಂಗ್ರೆಸ್ ಹಾಗೂ ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದಿದ್ದಾರೆ.
ಕುಕ್ಕೆಹಳ್ಳಿ ಗ್ರಾಪಂ 14 ವಾರ್ಡ್ ಗಳ ಪೈಕಿ 8 ಬಿಜೆಪಿ, 2 ಕಾಂಗ್ರೆಸ್ ಹಾಗೂ 4 ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಬೈರಂಪಳ್ಳಿ ಗ್ರಾಪಂನ 16 ಕ್ಷೇತ್ರಗಳ ಪೈಕಿ ಬಿಜೆಪಿ 13, ಕಾಂಗ್ರೆಸ್ 1 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
ಕಲ್ಯಾಣಪುರ ಗ್ರಾಪಂ 11 ವಾರ್ಡ್ ಗಳ ಪೈಕಿ ಬಿಜೆಪಿ 1, ಕಾಂಗ್ರೆಸ್ 4 ಹಾಗೂ ಆರು ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದು, ಅತಂತ್ರ ಪರಿಸ್ಥಿತಿ ನಿರ್ಮಾಣ ಆಗಿದೆ. ಪಕ್ಷೇತರ ಅಭ್ಯರ್ಥಿಗಳು ಯಾರ ಕಡೆಗೆ ಒಲವು ತೋರುತ್ತಾರೋ ಆ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಆಡಳಿತಕ್ಕೆ ಬರಲಿದ್ದಾರೆ.
ತೊನ್ಸೆ ಗ್ರಾಪಂ 21 ವಾರ್ಡ್ ಗಳ ಪೈಕಿ 6 ಬಿಜೆಪಿ, 9 ಕಾಂಗ್ರೆಸ್, 5 ಪಕ್ಷೇತರ ಹಾಗೂ ಒಂದು ಕ್ಷೇತ್ರದಲ್ಲಿ ಎಸ್ ಡಿಪಿಐ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ತೆಂಕನಿಡಿಯೂರು ಗ್ರಾಪಂ 26 ವಾರ್ಡ್ ಗಳ ಪೈಕಿ 14 ಬಿಜೆಪಿ, 11 ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.
ಬಡಾನಿಡಿಯೂರು ಗ್ರಾಪಂ 11 ಕ್ಷೇತ್ರಗಳ ಪೈಕಿ 8 ಬಿಜೆಪಿ ಹಾಗೂ 3 ಕಾಂಗ್ರೆಸ್ ಗೆಲುವು ಸಾಧಿಸಿದೆ.
ಅಂಬಲಪಾಡಿ ಗ್ರಾಪಂ 19 ವಾರ್ಡ್ ಪೈಕಿ 17 ಬಿಜೆಪಿ ಹಾಗೂ ಎರಡರಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ.
ಕಡೆಕಾರು ಗ್ರಾಪಂನ 19 ಕ್ಷೇತ್ರಗಳ ಪೈಕಿ ಬಿಜೆಪಿ 8, ಕಾಂಗ್ರೆಸ್ 12 ಹಾಗೂ ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವಿನ ನಗೆ ಬೀರಿದ್ದಾರೆ.
ಉದ್ಯಾವರ ಗ್ರಾಪಂ 30 ವಾರ್ಡ್ ಗಳ ಪೈಕಿ 15 ವಾರ್ಡ್ ಗಳಲ್ಲಿ ಬಿಜೆಪಿ, 13 ಕಾಂಗ್ರೆಸ್ ಹಾಗೂ ಎರಡು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ.
ಆತ್ರಾಡಿ ಗ್ರಾಪಂ 14 ವಾರ್ಡ್ ಗಳ ಪೈಕಿ 7 ಬಿಜೆಪಿ ಹಾಗೂ ಕಾಂಗ್ರೆಸ್ 7 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಸಮಬಲದ ಹೋರಾಟ ನಡೆದಿದೆ.
ಬೊಮ್ಮರಬೆಟ್ಟು ಗ್ರಾಪಂ 21 ವಾರ್ಡ್ ಗಳಲ್ಲಿ ಬಿಜೆಪಿ 11 ಹಾಗೂ ಕಾಂಗ್ರೆಸ್ 10 ಗೆಲುವು ದಾಖಲಿಸುವ ಮೂಲಕ ಜಿದ್ದಾಜಿದ್ದಿನ ಸ್ಪರ್ಧೆಯೊಡ್ಡಿದೆ.
ಅಲೆವೂರು ಗ್ರಾಪಂ 29 ಪೈಕಿ 13 ಬಿಜೆಪಿ ಹಾಗೂ 16 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ.
ಮಣಿಪುರ ಗ್ರಾಪಂ ವಾರ್ಡ್ 16 ಪೈಕಿ 6 ಬಿಜೆಪಿ ಹಾಗೂ 10 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದೆ.
ಕೊಡಿಬೆಟ್ಟು ಗ್ರಾಪಂ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.