ಉಡುಪಿ: ಉಡುಪಿ ಸುನಾಗ್ ಆರ್ಥೋಕೇರ್ ಆ್ಯಂಡ್ ಮಲ್ಟಿಸ್ಪೆಷಾಲಿಟಿ ಸೆಂಟರ್ ಹಾಗೂ ಸುನಾಗ್ ನೇತ್ರ ಚಿಕಿತ್ಸಾಲಯ ಇವರ ಆಶ್ರಯದಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರ ಮಾರ್ಚ್ 21ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ಗಂಟೆಯವರೆಗೆ ಉಡುಪಿ ಎಂಜಿಎಂ ಕಾಲೇಜಿನ ಎದುರುಗಡೆ ರಸ್ತೆಯಲ್ಲಿ ಇರುವ ಸುನಾಗ್ ಆರ್ಥೋಕೇರ್ ಆ್ಯಂಡ್ ಮಲ್ಟಿಸ್ಪೆಷಾಲಿಟಿ ಸೆಂಟರ್ ನಲ್ಲಿ ನಡೆಯಲಿದೆ.
ಭಾಗವಹಿಸುವ ತಜ್ಞರು:
ಮೂಳೆ ತಜ್ಞ ಡಾ. ನರೇಂದ್ರ ಕುಮಾರ್ ಎಚ್.ಎಸ್., ಅರಿವಳಿಕೆ ಹಾಗೂ ಕುಟುಂಬ ತಜ್ಞೆ ಡಾ. ವೀಣಾ ನರೇಂದ್ರ ಎಚ್., ನೇತ್ರ ತಜ್ಞರಾದ ಡಾ. ರೂಪಶ್ರೀ ರಾವ್, ಡಾ. ಹರಿಪ್ರಸಾದ್ ಓಕುಡ ಶಿಬಿರದಲ್ಲಿ ಭಾಗವಹಿಸುವರು.
ಉಚಿತ ತಪಾಸಣೆಗಳು:
*ರಕ್ತದೊತ್ತಡ ತಪಾಸಣೆ
*ಮೂಳೆ ಸಾಂದ್ರತೆ ತಪಾಸಣೆ
*ಸಕ್ಕರೆ ಕಾಯಿಲೆಯ ತಪಾಸಣೆ *ಕಣ್ಣಿನ ಪೊರೆ ತಪಾಸಣೆ
*ಕಣ್ಣಿನ ಇತರ ಸಮಸ್ಯೆಗಳ ತಪಾಸಣೆ, ಚಿಕಿತ್ಸೆ
*ಅಗತ್ಯವಿರುವ ಶಿಬಿರಾರ್ಥಿಗಳಿಗೆ ಕನ್ನಡಕದ ವ್ಯವಸ್ಥೆಯನ್ನು ರಿಯಾಯಿತಿ ದರದಲ್ಲಿ ಕೊಡಲಾಗುವುದು.
*ಪೊರೆ ಶಸ್ತ್ರಚಿಕಿತ್ಸೆ ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು.
ಶಿಬಿರಾರ್ಥಿಗಳಿಗೆ ಲಭ್ಯವಿರುವ ಉಚಿತ ಔಷಧಿಗಳು ಹಾಗೂ ರಿಯಾಯಿತಿ ದರದಲ್ಲಿ ಔಷಧಿಗಳನ್ನು ನೀಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ.ನಂ. 74838 34536 ಸಂಪರ್ಕಿಸಬಹುದು.