ಉಡುಪಿ: “ಸ್ಮರಣಿಕಾ”ದಲ್ಲಿ ಪಾರಂಪರಿಕ ಗೂಡುದೀಪ, ಎಲ್ಇಡಿ ಲೈಟ್ಸ್ ಗಳ ಪ್ರದರ್ಶನ ಮತ್ತು ಮಾರಾಟ

ಉಡುಪಿ: ಕಳೆದ 29 ವರ್ಷಗಳಿಂದ ಉಡುಪಿ ಜನತೆಯ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿರುವ ಸ್ಮರಣಿಕಾ, ಬಾಂಬೆ ಸ್ವೀಟ್ಸ್ ಹಾಗೂ ಅದರ ಸಹ ಸಂಸ್ಥೆಗಳಲ್ಲಿ ದೀಪಾವಳಿ ಪ್ರಯುಕ್ತ ಪಾರಂಪರಿಕ ಶೈಲಿಯ ಗೂಡುದೀಪ, ಎಲ್ ಇಡಿ ಲೈಟ್ಸ್ ಬೃಹತ್ ಮಾರಾಟ ಮೇಳವನ್ನು ಆಯೋಜಿಸಲಾಗಿದೆ.

ಇದೀಗ ನಗರದ ಸಿಟಿ ಬಸ್ ನಿಲ್ದಾಣ ಬಳಿಯ ನರ್ಮ್ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಸ್ಮರಣಿಕಾ, ಬಾಂಬೆ ಸ್ವೀಟ್ಸ್ ಸೆಂಟರ್ ಕಾರ್ಯಾಚರಿಸುತ್ತಿದೆ.

ವೈವಿಧ್ಯ ವಸ್ತುಗಳ‌ ಸಂಗ್ರಹ:
ದೀಪಾವಳಿ ಹಬ್ಬಕ್ಕಾಗಿ ವಿಶೇಷವಾಗಿ ಬಳಸಲಾಗುವ ಮಣ್ಣಿನ ಹಣತೆ, ಮೂಡೆ ಮಾಡುವ ಕೊಟ್ಟೆ, ಅರಶಿನ ಎಲೆ ಆಕರ್ಷಕ ದರದಲ್ಲಿ ಲಭ್ಯವಿದೆ. ಬಾಂಬೆ ಸ್ವೀಟ್ಸ್ ನಲ್ಲಿ ಡ್ರೈ ಪ್ರೂಟ್ಸ್, ಶುಗರ್ ಫ್ರೀ ಮೈಸೂರ್ ಪಾಕ್, ಕಾಜೂ ಕಟ್ಲಿ, ರೋಸ್, ಶುಗರ್ ಫ್ರೀ ಬಾದಾಮ್ ಆರೆಂಜ್ ಹಲ್ವಾ, ಪಿಸ್ತಾ, ಪೇಡ, ಕೇಸರ್ ಪೇಡ, ಪಿಸ್ತಾ ಬರ್ಫಿ, ಬೇಸನ್ ಲಾಡು, ಬೂಂದಿ ಲಾಡು, ಡಿಂಕ್ ಲಾಡು, ಮೋತಿಚೂರ್ ಸ್ಪೆಷಲ್ ತುಪ್ಪದ ಲಾಡು ಹಾಗೂ ಸ್ಥಳೀಯವಾಗಿ ದೊರೆಯುವ ಹತ್ತು ಹಲವು ಬಗೆಯ ಸ್ವೀಟ್ಸ್ ಗಳು ವಿಶೇಷ ದರದಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮೆಮೆಂಟೋಗೆ ಫೇಮಸ್:
ಸ್ಮರಣಿಕಾ ಗಿಫ್ಟ್ ಐಟಂ, ನೆನಪಿನ ಕಾಣಿಕೆ, ಮೊಮೆಂಟೋ ಸಹಿತ ವಿಭಿನ್ನ ರೀತಿಯ ವಿಶಿಷ್ಟ ಉಡುಗೊರೆಗಳಿಗೆ ಪ್ರಸಿದ್ಧಿ ಪಡೆದಿದೆ. ಈಗಲೂ ಹಳೆಯ ಸಂಪ್ರದಾಯವನ್ನು‌ ಉಳಿಸಿಕೊಂಡು ಹೊಸ ಸಂಪ್ರದಾಯಕ್ಕೆ ಅನುಗುಣವಾಗಿ ನೆನಪಿನ ಕಾಣಿಕೆ ಹಾಗೂ ವಿವಿಧ ವಸ್ತುಗಳಿಗೆ ಸ್ಮರಣಿಕಾ ಫೇಮಸ್ ಆಗಿದೆ. ಇಲ್ಲಿ ಉತ್ತಮ ಗುಣಮಟ್ಟದ ದಿನಬಳಕೆಯ ದಿನಸಿ ಐಟಂಗಳು, ಗೃಹೋಪಯೋಗಿ ಉಪಕರಣಗಳು ಕಡಿಮೆ ದರದಲ್ಲಿ‌ ಲಭ್ಯವಿದೆ.