ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಗೀತೋತ್ಸವ ನಡೆಯುತ್ತಿದೆ. ನವೆಂಬರ್ 28 ರಂದು ಪ್ರಧಾನಿ ಮೋದಿ ಕೂಡ ಗೀತೋತ್ಸವಕ್ಕೆ ಭೇಟಿ ಕೊಡುವ ಕಾರ್ಯಕ್ರಮ ಆಯೋಜನೆಗೊಂಡಿದೆ. ಈ ಮಧ್ಯೆ ಗೀತಾ ಮಹೋತ್ಸವದ ವೇಳೆ ದೈವದ ಆರಾಧನೆ ನಡೆಸುವ ಪಾಣಾರ ಸಮುದಾಯದವರ ವಾರ್ಷಿಕ ಉತ್ಸವ ನಡೆಸಲಾಯಿತು.
ದೈವ ನರ್ತಕರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭ ನಡೆದವು. ಈ ವೇಳೆ ದೈವ ನರ್ತಕರು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರನ್ನು ವಿಶಿಷ್ಟ ರೀತಿಯಲ್ಲಿ ಸನ್ಮಾನಿಸಿದರು. ಮಠದ ವತಿಯಿಂದ ಪಾಣಾರ ಸಂಘದವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಗೌರವಿಸಲಾಯಿತು. ಅವರು ನಡೆಸುವ ಅದಮ್ಯ ಟ್ರಸ್ಟ್ ಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.


















