ಉಡುಪಿ ಜಿಲ್ಲಾ ನಾಗರಿಕ ಸಮಿತಿ: ನ.25ಕ್ಕೆ ಪದ್ಮವಿಭೂಷಣ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ

ಉಡುಪಿ: ವೃಂದಾವನಸ್ಥ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭಾರತ ಸರಕಾರದಿಂದ ಕೊಡಮಾಡಿದ ನಿರ್ಯಾಣೋತ್ತರ ಪದ್ಮವಿಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೀ ವಿಶ್ವಪ್ರಸನ್ನ ಶ್ರೀಪಾದರಿಗೆ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿರುವ ಅಕ್ಷರ ಸಂತ ಶ್ರೀ ಹರೇಕಳ ಹಾಜಬ್ಬ ಅವರಿಗೆ ಅಭಿನಂದಿಸುವ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಯೋಜಿಸಿದೆ.

ನ.25ರ ಗುರುವಾರ ಬೆಳಿಗ್ಗೆ 10.30 ಕ್ಕೆ ಕಿದಿಯೂರ್ ಹೋಟೆಲ್ ನ ಪವನ್ ರೂಪ್ ಟಾಪ್ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಲಿದೆ. ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್ ಅಧ್ಯಕ್ಷತೆ ವಹಿಸುವರು.

ಉಡುಪಿ ಕಾನೂನು ಅಧಿಕಾರಿ, ಕಿರಿಯ/ ಅಸಿಸ್ಟೆಂಟ್ ಆಪ್ ಪ್ರಾಸಿಕ್ಯೂಶನ್ ಮುಮ್ತಾಜ್ (ಎ.ಡಿ.ಪಿ), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ. ಕೆ. ಕೃಷ್ಣಪ್ರಸಾದ್, ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ, ಕಿದಿಯೂರ್ ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರ್, ಮಲಬಾರ್ ಗೋಲ್ಡ್ ನ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ಅಡ್ಯಾರು, ಸಮಾಜ ಸೇವಕ ಕೆ.ಕೃಷ್ಣಮೂರ್ತಿ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

ವಿಶೇಷ ಆಕರ್ಷಣೆ’
ಅಂಬಲಪಾಡಿ ಕಲಾವಿದ ಕೆ.ಜೆ ಕೃಷ್ಣ ಅವರು ರಚಿಸಿದ “ತುಳುನಾಡ ಕಲಾ ಸಿರಿ” (ವಿಶೇಷ ಪೇಟ, ಕೇದಗೆಮುಂದಲೆ- ಅಣಿ ಮಾದರಿ ಕಿರೀಟ) ತೊಡಿಸಿ ಹಾಜಬ್ಬನವರಿಗೆ ಸನ್ಮಾನ ನಡೆಯಲಿದೆ.