ಉಡುಪಿ: ಕೊರೊನಾ ಸೋಂಕಿನಿಂದ ಸಾಕಷ್ಟು ಮಂದಿ ಸಾವನ್ನಪ್ಪುತ್ತಿದ್ದರೆ, ಇದೀಗ ಕೊರೊನಾ ಸೋಂಕು ಸೃಷ್ಟಿಸುತ್ತಿರುವ ಭಯಾನಕತೆಯಿಂದ ಭೀತಿಕೊಂಡು ಸಾವಿಗೆ ಶರಣಾಗುತ್ತಿರುವ ಪ್ರಕರಣಗಳು ಕಂಡು ಬರುತ್ತಿದೆ. ಉಡುಪಿಯಲ್ಲೊಬ್ಬ ಯುವಕ ಕೊರೊನಾ ಭೀತಿಯಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೆಳಾರ್ಕಳಬೆಟ್ಟು ಶ್ಯಾಮಿಲಿ ಗ್ಯಾಸ್ ಗೋಡೌನ್ ರಸ್ತೆ ನಿವಾಸಿ ಪ್ರಸನ್ನ ಡಿ ಅಲ್ಮೇಡ(26) ಮೃತ ಯುವಕ. ಈತ ಕೆಲ ಸಮಯಗಳ ಹಿಂದೆ ಮಾನಸಿಕ ಖಿನ್ನತೆಗೆ ಒಳಪಟ್ಟಿದ್ದು, ಇದರಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದನು.
ಅಲ್ಲದೆ, ಪ್ರಸನ್ನ ಅಲ್ಮೇಡನ ಅಣ್ಣ ದೆಹಲಿಯಲ್ಲಿ ಉದ್ಯೋಗದಲ್ಲಿದ್ದು, ಅಲ್ಲಿ ಕೊರೊನಾ ಹೆಚ್ಚುತ್ತಿರುವ ವಿಷಯ ತಿಳಿದು ಮತ್ತಷ್ಟು ಮಾನಸಿಕವಾಗಿ ನೊಂದಿದ್ದನು ಎನ್ನಲಾಗಿದೆ. ಇದೇ ಕಾರಣದಿಂದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.