ಉಡುಪಿ: ಲಾಕ್ ಡೌನ್ ಘೋಷಣೆಯಿಂದ ಮನನೊಂದ ಆಟೊ ಚಾಲಕರೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ 76 ಬಡಗುಬೆಟ್ಟುವಿನ ಬೈಲೂರಿನಲ್ಲಿ ಇಂದು ನಡೆದಿದೆ.
ಉಡುಪಿಯ ಮೀನು ಮಾರುಕಟ್ಟೆ ಬಳಿಯ ಆಟೋ ಸ್ಟ್ಯಾಂಡಿನ ಆಟೋ ಚಾಲಕ ಬೈಲೂರು ನಿವಾಸಿ ಯತಿರಾಜ್ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಇವರು ಲಾಕ್ ಡೌನ್ ನಿಂದಾಗಿ ದುಡಿಮೆ ಇಲ್ಲದೆ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದೇ ಕಾರಣದಿಂದ ಮನನೊಂದು ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.