ಉಡುಪಿ:ಸ್ವಾಧೀನಪಡಿಸಿಕೊಂಡ ವಾಹನಗಳ ಹರಾಜು

ಉಡುಪಿ: ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಿವಿಧ ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾದ ಕೆ.ಎ 20 ಝಡ್ 0711 ಐ20 ಸ್ಪೋಟ್ಜ್ 1.2 ಬಿಎಸ್4 ಹುÊಂಡೈ ಮೋಟಾರ್ ಕಾರ್, ಕೆ.ಎ 20 ಇಜಿ 4113 ಆಕ್ಸೆಸ್ 125 ಬಿಎಸ್3 ಸುಝುಕಿ ಮೋಟಾರ್ ಸೈಕಲ್, ಕೆ.ಎ 20 ಡಿ 5558 ಅಪೆ ಸಿಟಿ ಎಲ್‌ಪಿಜಿ 200 ಪಾಸ್ ಪಿಯಾಜಿಯೋ ವೆಹಿಕಲ್ ಹಾಗೂ ಕೆಎ 20 ಇಎಮ್ 0427 ಟಿವಿಎಸ್ ಜುಪಿಟರ್ ವಾಹನಗಳ ವಾರೀಸುದಾರರು ಈವರೆಗೂ ತಮ್ಮ ವಶಕ್ಕೆ ಪಡೆಯದೇ ಇರುವ ಹಿನ್ನೆಲೆ, ನ್ಯಾಯಾಲಯದ ಆದೇಶದಂತೆ ಮೇಲ್ಕಂಡ ವಾಹನಗಳನ್ನು ನವೆಂಬರ್ 20 ರಂದು ಬೆಳಗ್ಗೆ 10 ಗಂಟೆಗೆ ಶಿರ್ವ ಪೊಲೀಸ್ ಠಾಣಾ ಆವರಣದಲ್ಲಿ ಹರಾಜು ಮಾಡಲಾಗುವುದು. ಆಸಕ್ತರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಶಿರ್ವ ಪೊಲೀಸ್ ಠಾಣೆಯ ಉಪ ನಿರೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ.