ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ ಕುರಿತಂತೆ ಟ್ವಿಟರ್ ಅಭಿಯಾನ: ವ್ಯಾಪಕ ಬೆಂಬಲ

ಮಂಗಳೂರು: ತುಳು ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನ ನೀಡುವ ಕುರಿತಂತೆ ಟ್ವಿಟರ್ ನಲ್ಲಿ ನಡೆದ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ತುಳು ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನ ನೀಡುವ ಕುರಿತಂತೆ ಜೈ ತುಳುನಾಡು ಸಂಘಟನೆ ಸೇರಿದಂತೆ ಹಲವಾರು ಇತರ ತುಳು ಪರ ಸಂಘಟನೆಗಳು ಮತ್ತು ತುಳು ಬೆಂಬಲಿಗರು 24 ಗಂಟೆಗಳ ಟ್ವಿಟರ್ ಅಭಿಯಾನವನ್ನು ನಡೆಸಿದರು.

ತುಳುವನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕು ಮತ್ತು ಸಂವಿಧಾನದ ಸಂವಿಧಾನದ ಎಂಟನೇ ಶೆಡ್ಯೂಲ್ ನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.