ಸಿ.ಎ ಫೈನಲ್ ಫಲಿತಾಂಶ: ತ್ರಿಶಾ ಕಾಲೇಜಿನ ವಿದ್ಯಾರ್ಥಿನಿಯರು ಉತ್ತೀರ್ಣ

ಉಡುಪಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸುವ ಸಿ.ಎ ಫೈನಲ್ ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.

ಉಡುಪಿಯ ಅಂಕಿತಾ ಶೆಣೈ. ಇವರು ಶಿವಪ್ರಸಾದ್ ಶೆಣೈ ಹಾಗೂ ಅಂಜನಾ ಶೆಣೈ ದಂಪತಿಯ ಪುತ್ರಿಯಾಗಿದ್ದು, ಕೆ. ರಾವ್ ಆಂಡ್ ಕೋ. ಉಡುಪಿಯಲ್ಲಿ ತಮ್ಮ ಆರ್ಟಿಕಲ್ ಷಿಪ್ ಅನ್ನು ಮುಗಿಸಿದ್ದಾರೆ. ಇವರು ತಮ್ಮ ಸಿ.ಪಿ.ಟಿ ಹಾಗೂ ಇಂಟರ್ಮಿಡಿಯೇಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದುಕೊಂಡಿದ್ದಾರೆ.

ಕಡೆಕಾರಿನ ಪದ್ಮಶ್ರೀ ಭಟ್. ಇವರು ಬಿ. ಎಸ್. ಶಶೀಂದ್ರ ಭಟ್ ಹಾಗೂ ವಿದ್ಯಾ ಎಸ್. ಭಟ್ ದಂಪತಿಯ ಪುತ್ರಿಯಾಗಿದ್ದು, ಶ್ರೀ ರಾಮುಲು ನಾಯ್ಡು ಆಂಡ್ ಕೋ. ಮಂಗಳೂರಿನಲ್ಲಿ ತಮ್ಮ ಆರ್ಟಿಕಲ್ ಷಿಪ್ ಅನ್ನು ಮುಗಿಸಿದ್ದಾರೆ. ಇವರು ತಮ್ಮ ಸಿ.ಪಿ.ಟಿ ಹಾಗೂ ಇಂಟರ್ಮಿಡಿಯೇಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದುಕೊಂಡಿದ್ದಾರೆ ಅಲ್ಲದೆ ಸಿ.ಎ ವಿದ್ಯಾಭ್ಯಾಸದ ಜೊತೆಗೆ ಬಿ. ಕಾಂ ಪದವಿಯನ್ನು ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಕಟಪಾಡಿಯಲ್ಲಿ ಪಡೆದುಕೊಂಡಿದ್ದಾರೆ.

ಮೂಡುಬಿದ್ರೆಯ ಸುಪ್ರೀತಾ ಭಟ್ . ಇವರು ಗಣೇಶ್ ಭಟ್ ಹಾಗೂ ವೀಣಾ ಜಿ. ಭಟ್ ದಂಪತಿಯ ಪುತ್ರಿಯಾಗಿದ್ದು, ಎಂ. ಜಗನ್ನಾಥ್ ಕಾಮತ್ ಆಂಡ್ ಕೋ. ಮಂಗಳೂರಿನಲ್ಲಿ ತಮ್ಮ ಆರ್ಟಿಕಲ್ ಷಿಪ್ ಅನ್ನು ಮುಗಿಸಿದ್ದಾರೆ. ಇವರು ತಮ್ಮ ಸಿ.ಪಿ.ಟಿ ಹಾಗೂ ಇಂಟರ್ಮಿಡಿಯೇಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದುಕೊಂಡಿದ್ದಾರೆ ಅಲ್ಲದೆ ಸಿ.ಎ ವಿದ್ಯಾಭ್ಯಾಸದ ಜೊತೆಗೆ ಬಿ. ಕಾಂ ಪದವಿಯನ್ನು ತ್ರಿಶಾ ವಿದ್ಯಾ ಕಾಲೇಜು ಕಟಪಾಡಿಯಲ್ಲಿ ಪಡೆದುಕೊಂಡಿದ್ದಾರೆ.

ಬೈಂದೂರಿನ ವ್ರಂದಾ ವಿ. ಕಿಣಿ. ಇವರು ಕೆ. ವೆಂಕಟೇಶ್ ಕಿಣಿ ಹಾಗೂ ನಯನ ಕಿಣಿ ದಂಪತಿಯ ಪುತ್ರಿಯಾಗಿದ್ದು, ಸಿ. ಎ ಗಿರಿಧರ್ ಕಾಮತ್ ಇವರ ‘ಗಣೇಶ್ ಆಂಡ್ ಸುಧೀರ್ ಕೋ ಮಂಗಳೂರಿನಲ್ಲಿ ತಮ್ಮ ಆರ್ಟಿಕಲ್ ಷಿಪ್ ಅನ್ನು ಮುಗಿಸಿದ್ದರು. ಇವರು ತಮ್ಮ ಸಿ.ಪಿ.ಟಿ ಹಾಗೂ ಇಂಟರ್ಮಿಡಿಯೇಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ಉಡುಪಿಯಲ್ಲಿ ಪಡೆದುಕೊಂಡಿದ್ದಾರೆ.