ಪಿಯುಸಿ ಶಿಕ್ಷಣವನ್ನು ಮುಗಿಸಿ ಡಿಗ್ರಿಗೆ ದಾಪುಗಾಲು ಇಟ್ಟಿರುವ ಬಹುಪಾಲು ವಿದ್ಯಾರ್ಥಿಗಳಿಗೆ ಡಿಗ್ರಿ ನಂತರ ಮುಂದೇನು ಅನ್ನೋದರ ಬಗ್ಗೆ ಗೊಂದಲ ಇದ್ದೆ ಇರುತ್ತೆ. ಸಿಕ್ಕಿದ ಕೆಲಸಕ್ಕೆಸೇರಿ ಕೊಟ್ಟ ವೇತನಕ್ಕೆ ತೃಪ್ತಿ ಪಡುವುದೋ?…ಶಿಕ್ಷಣವನ್ನು ಮುಂದುವರೆಸಿ ಉತ್ತಮ ಸಂಬಳದ ಕೆಲಸಕ್ಕೆ ಸೇರುವುದೋ?.. ಡಿಗ್ರಿಗೆ ಶಿಕ್ಷಣ ನಿಲ್ಲಿಸಿ ಉತ್ತಮ ವೇತನದ ಕೆಲಸ ಸಿಗದಿದ್ರೆ ಮುಂದೇನು ಮಾಡುವುದೋ?… ಹೀಗೆ ಹತ್ತು ಹಲವು ಪ್ರಶ್ನೆಗಳು ತಲೆಯಲ್ಲಿ ಗಿರಾಕಿ ಹೊಡೆಯುತ್ತಿರುತ್ತದೆ. ಗಮನಿಸಿ ನೋಡಿದರೆ ಮೇಲ್ಕಂಡ ಎಲ್ಲಾ ಪ್ರಶ್ನೆಗಳಲ್ಲೂ ಎರಡು ವಿಷಯ ಸಮಾನ ಅದೇನೆಂದರೆ ಕೆಲಸ ಹಾಗೂ ವೇತನ ಇವೆರಡಕ್ಕೂ ಒಂದು ಉತ್ತಮ ಪರಿಹಾರ ಕಂಪನಿ ಸೆಕ್ರೆಟರಿ ಕೋರ್ಸ್.
ಕಂಪನಿ ಸೆಕ್ರೆಟರಿ ಕೋರ್ಸ್ (ಸಿಎಸ್) ಎಂದರೇನು?
ಇದೊಂದು ಪ್ರೊಫೆಷನಲ್ ಡಿಗ್ರಿ ಇದನ್ನು ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ICSI) ಒದಗಿಸುತ್ತಿದೆ. ಈ ಸಂಸ್ಥೆಯು 1980 ರಲ್ಲಿ ಆದ ಕಾಯ್ದೆಯಾನುಸಾರ ಸ್ವಾಯತ್ತತೆ ಸಂಸ್ಥೆಯಾಗಿ ಪ್ರಾರಂಭವಾಯಿತು. ಕೇಂದ್ರ ಕಚೇರಿ ಡೆಲ್ಲಿಯಲ್ಲಿ ಸ್ಥಾಪಿತವಾಗಿದೆ. ನಾಲ್ಕು ಪ್ರಾಂತೀಯ ಕಚೇರಿಗಳು ಕೋಲ್ಕತ್ತ, ಮುಂಬೈ, ಚೆನ್ನೈ ಹಾಗೂ ಡೆಲ್ಲಿಯಲ್ಲಿದೆ ಹಾಗೇನೇ ಭಾರತಾದ್ಯಂತ 72 ಶಾಖೆಗಳು ಕಾರ್ಯಾಚರಿಸುತ್ತಿವೆ.
ಸಿಎಸ್ ಕೋರ್ಸ್ ಮಾಡಿದರೆ ಯಾವುದೆಲ್ಲ ಉದ್ಯೋಗ ಅವಕಾಶಗಳಿವೆ?
ಕಂಪನಿ ಸೆಕ್ರೆಟರಿ ಕೋರ್ಸ್ ಮುಗಿಸಿದ ನಂತರ ಭಾರತೀಯ ಕಂಪನಿ ಕಾರ್ಯದರ್ಶಿಗಳ ಸಂಸ್ಥೆ (ICSI) ಸದ್ಯಸ್ವತ್ವ ಸಂಖ್ಯೆ ಒದಗಿಸುತ್ತೆ ನಂತರ ಎರಡು ಅವಕಾಶಗಳು ತೆರೆದುಕೊಳ್ಳುತ್ತವೆ. 2013ರ ಕಂಪನಿ ಕಾಯ್ದೆ ಪ್ರಕಾರ 10 ಕೋಟಿಗಿಂತ ಮೇಲ್ಪಟ್ಟು ಮೂಲ ಬಂಡವಾಳ ಹೊಂದಿರೋ ಕಂಪನಿಗಳು ಕಡ್ಡಾಯವಾಗಿ ಕಂಪನಿ ಸೆಕ್ರೆಟರಿ ನೇಮಕ ಮಾಡಲೇಬೇಕು ಹಾಗಾಗಿ ಯಾವುದಾದರೂ ಖಾಸಗಿ ಅಥವಾ ಪಬ್ಲಿಕ್ ಕಂಪನಿಯಲ್ಲಿ ಸುಲಭವಾಗಿ ಕೆಲಸ ದೊರೆಯುತ್ತದೆ ಮೊತ್ತೊಂದು ಅವಕಾಶ ಸ್ವತಂತ್ರವಾಗಿ ವೃತ್ತಿನಿರಿತ ಕಂಪನಿ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುವುದು. ವೃತ್ತಿನಿರಿತ ಕಂಪನಿ ಸೆಕ್ರೆಟರಿಯಾದವರಿಗೆ ಜಿಎಸ್ಟಿ ಪ್ರಾಕ್ಟೀಷನರ್, ಇಂಸೊಲ್ವೆನ್ಸಿ ಪ್ರೊಫೆಷನಲ್, ಇಂಟರ್ನಲ್ ಆಡಿಟರ್ ಹಾಗೇನೇ ಕಂಪನಿಗಳ ಮಧ್ಯೆ ಯಾವುದೇ ವಿವಾದಗಳು ತಲೆದೂರಿದರೆ ಸಂಬಂಧಪಟ್ಟ ನ್ಯಾಯಮಂಡಳಿ ಮುಂದೆ ಹಾಜರಾಗಿ ಕಂಪನಿಯನ್ನು ಪ್ರತಿನಿಧಿಸುವ ಹಕ್ಕು ಸೇರಿದಂತೆ ವಿಪುಲ ಆವಕಾಶಗಳಿರುತ್ತದೆ. ಸಿಎಸ್ ಪರೀಕ್ಷೆಯ ಹಂತಗಳುಮೊದಲನೇ ಹಂತ – CSEET (Company Secretary Executive Entrance Test)ಎರಡನೇ ಹಂತ – Executive Programmeಮೂರನೇ ಹಂತ – Professional Programmeಮೂರೂ ಹಂತದ ಪರೀಕ್ಷೆಯನ್ನು ಮುಗಿಸುವ ಜೊತೆಗೆ ಯಾವುದಾದರೂ ಕಂಪನಿ ಅಥವಾ ವೃತ್ತಿನಿರತ ಕಂಪನಿ ಸೆಕ್ರೆಟರಿ ಅಡಿಯಲ್ಲಿ 21 ತಿಂಗಳು ಆರ್ಟಿಕಲ್ ಶಿಫ್ (Practical Training) ಮಾಡುವುದು ಕಡ್ಡಾಯವಾಗಿರುತ್ತದೆ. ಇದಕ್ಕೆ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ಪ್ರತಿ ತಿಂಗಳಿಗೆ ಇಂತಿಷ್ಟು ಹಣವನ್ನು ಸ್ಟೇಫಂಡ್ ಆಗಿ ಪಡೆಯುತ್ತಾರೆ. ಸಿಎಸ್ ಕೋರ್ಸ್ ಸೇರಲು ವಿದ್ಯಾರ್ಹತೆ ಏನು?ದ್ವಿತೀಯ ಪಿಯುಸಿ ತೇರ್ಗಡೆಗೊಂಡ ವಿದ್ಯಾರ್ಥಿಗಳು ಕೋರ್ಸ್ ನ ಮೊದಲನೇ ಹಂತವಾದ CSEETಗೆ ಹೆಸರು ನೋಂದಾಯಿಸಿ ಅಭ್ಯಾಸ ಪ್ರಾರಂಭ ಮಾಡಬಹುದು. ಹಾಗೇನೇ ಯಾವುದೇ ಪದವಿ ಕೋರ್ಸ್ ನಲ್ಲಿ ಕನಿಷ್ಟ ಶೇ.50 ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳು ಕೂಡ ನೇರವಾಗಿ ಕೋರ್ಸ್ ನ ಎರಡನೇ ಹಂತವಾದ CS Executive ಪರೀಕ್ಷೆಯನ್ನು ನೇರವಾಗಿ ಎದುರಿಸಬಹುದು.
ಸಿಎಸ್ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸುವುದು ಹೇಗೆ?.
ಕಂಪನಿ ಸೆಕ್ರೆಟರಿ ಕೋರ್ಸ್ ಗೆ ಸೇರಿದ ನಂತರ ICSI ಸಂಸ್ಥೆಯು ಅಗತ್ಯ ಪಠ್ಯ ಸಾಮಗ್ರಿಗಳನ್ನು ಒದಗಿಸುತ್ತೆ ಅದನ್ನು ಚೆನ್ನಾಗಿ ಅಧ್ಯಯನ ಮಾಡಬೇಕು. ನಿಯಮಿತ ಅಧ್ಯಯನ ಜೊತೆಗೆ ವಿಷಯಗಳನ್ನು ಹೆಚ್ಚು ಆಳವಾಗಿ ಓದಿಕೊಳ್ಳಬೇಕು. ಉತ್ತಮ ತರಬೇತಿ ಕೇಂದ್ರವನ್ನು ಆಯ್ಕೆ ಮಾಡಿ ಅವುಗಳಲ್ಲಿ ತರಬೇತಿಯನ್ನು ಪಡೆದರೆ ಯಶಸ್ಸನ್ನು ಗಳಿಸಿವುದು ಕಷ್ಟವೇನಲ್ಲ.
ನಾಗೇಶ್ ಶೆಣೈ ವಿ ರೀಚ್ ಅಕಾಡೆಮಿ ಉಡುಪಿ – 80881 61969