ನಾಳೆ (ಏ.27) ರಾಜ್ಯಾದ್ಯಂತ ಕೋವಿಡ್ ಕರ್ಪ್ಯೂ: ಏನಿದೆ.?, ಏನಿರಲ್ಲ?.

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ನಾಳೆ (ಏ.27) ರಾತ್ರಿ 9 ಗಂಟೆಯಿಂದ ರಾಜ್ಯಾದ್ಯಂತ 14 ದಿನಗಳ ಕಾಲ ಬಿಗಿಕ್ರಮ ಜಾರಿಗೊಳಿಸಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಈ ಸಮಯದಲ್ಲಿ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರೀತಿಯ ವಾತಾವರಣ ಇರಲಿದೆ. ಜನರಿಗೆ ಓಡಾಟ ನಡೆಸಲು ಅವಕಾಶ ಇಲ್ಲದಿರುವುದರಿಂದ ಸಾರಿಗೆಯನ್ನು ವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಬಂಧ ಮಾಡಲಾಗಿದೆ.

ರೈತರು ಬೆಳಗ್ಗೆ 6 ರಿಂದ 10ವರೆಗೂ ತಮ್ಮ ವಸ್ತುಗಳನ್ನು ಮಾರಾಟ ಮಾಡಬಹುದು. ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಲ್ಲ. ಗೂಡ್ಸ್​​ ವಾಹನಗಳು ಕೂಡ ಓಡಾಟ ಮಾಡಬಹುದು ಎಂದು ಸಿಎಂ ಸ್ಪಷ್ಟಪಡಿಸಿದರು.

ಮುಖ್ಯಾಂಶಗಳು..

ಈ ಸಮಯದಲ್ಲಿ ಸಾರಿಗೆ ಸೌಲಭ್ಯ ಇರುವುದಿಲ್ಲ.

ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಅವಕಾಶ ಇದೆ.

ಅಂತರ್ ರಾಜ್ಯ ಗೂಡ್ಸ್ ಸಾಗಾಟಕ್ಕೆ ತೊಂದರೆ ಇರುವುದಿಲ್ಲ.

ಅನಗತ್ಯ ಓಡಾಟ ನಡೆಸುವಂತಿಲ್ಲ.

ಗಾರ್ಮೆಂಟ್ಸ್ ಹೊರತು ಪಡಿಸಿ ಕೈಗಾರಿಕೆಗಳಿಗೆ ಅವಕಾಶ ಇದೆ.

6 ತಿಂಗಳು ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆಯುವುದಿಲ್ಲ.

ಬಾರ್​, ಹೋಟೆಲ್ ಗಳಲ್ಲಿ ​ಬೆಳಿಗ್ಗೆ 6ರಿಂದ ಬೆಳಿಗ್ಗೆ 10ರ ವರೆಗೆ ಪಾರ್ಸೆಲ್ ಗೆ ಅವಕಾಶ ನೀಡಲಾಗಿದೆ.