ಕಾರ್ಕಳ: ಈದು ಶ್ರೀ ಮೂಜಿಲ್ನಾಯ ದೈವಸ್ಥಾನದ ಆಡಳಿತವನ್ನು ಆಡಳಿತ ಅಧಿಕಾರಿಗೆ ಹಸ್ತಾಂತರಿಸಲು ಹಾಗೂ ಕಾಲಾವಧಿ ಜಾತ್ರೋತ್ಸವವನ್ನು ನೆರವೇರಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಇಂದು ದೈವಸ್ಥಾನದ ವಠಾರದಲ್ಲಿ ಧರಣಿ ನಡೆಸಿದರು.
ದೈವಸ್ಥಾನದ ವಠಾರದಲ್ಲಿ ಜಮಾಯಿಸಿದ್ದ ಗ್ರಾಮಸ್ಥರು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಶೀಘ್ರವೇ ಕಾಲಾವಧಿ ಜಾತ್ರೋತ್ಸವವನ್ನು ನೆರವೇರಿಸಬೇಕು ಎಂದು ಆಗ್ರಹಿಸಿದರು.