ಉಡುಪಿ: ತೆಂಕನಿಡಿಯೂರು ಗ್ರಾಮದ ಕೆಳಾರ್ಕಳಬೆಟ್ಟು ಗೋಮಾಳ ಜಾಗದ ಮದಗ (ಕೆರೆ)ದಲ್ಲಿ ಅಕ್ರಮವಾಗಿ ನಡೆಸುತ್ತಿರುವುದನ್ನು ಸ್ಥಗಿತಗೊಳಿಸುವಂತೆ ಗ್ರಾಮಸ್ಥರ ಪರವಾಗಿ ಜಿಲ್ಲಾಧಿಕಾರಿ ಎಂ ಕೂರ್ಮ ರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.
ತೆಂಕನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟು ಸರ್ವೆ ನಂಬ್ರ 61 ರಲ್ಲಿ ಗೋಮಾಳ ಜಾಗವಾಗಿದ್ದು ಅದರಲ್ಲಿ ಈಗಾಗಲೆ ಹಿಂದೂ ರುದ್ರಭೂಮಿ ಮತ್ತು ಘನ ದ್ರವ ತ್ಯಾಜ್ಯ ವಿಲೇವಾರಿ ಘಟಕವನ್ನು ಕೂಡ ನಿರ್ಮಿಸಿರುತ್ತಾರೆ. ಅ ಘಟಕದ ದ್ರವ ತ್ಯಾಜ್ಯಗಳಿಂದ ಸಮಸ್ಯೆ ಅನುಭವಿಸುತ್ತಿದ್ದರು ಗ್ರಾಮದ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಹಿಸಿಕೊಂಡಿರುತ್ತೇವೆ. ಆದರೆ ಅದರ ಪಕ್ಕದ ಸರಕಾರಿ ಗೋಮಾಳ ಜಾಗದಲ್ಲಿ ಮತ್ತೊಂದು ಗುಪ್ತವಾಗಿ ಕಾಮಗಾರಿಯು ನಡೆಯುತ್ತಿದ್ದು, ಸರಕಾರಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಅವಕಾಶನೀಡದೆ ಕಬಳಿಸುವ ಹುನ್ನಾರ ನಡೆಯುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಏಕೆಂದರೆ ಈ ವಿಚಾರವಾಗಿ ವಾರ್ಡ್ ಸದಸ್ಯರಲ್ಲಿ ಕೇಳಿಕೊಂಡಾಗ ಯಾವುದೇ ಮಾಹಿತಿ ಅವರಿಗೆ ಇಲ್ಲದಿರುವುದದೇ ಇದಕ್ಕೆ ಕಾರಣವಾಗಿದೆ.
ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಕಾಮಗಾರಿಯ ಬಗ್ಗೆ ಸಮಗ್ರವಾದ ಮಾಹಿತಿ ಹಾಗೂ ದಾಖಲೆಗಳನ್ನು ಸಾರ್ವಜನಿಕವಾಗಿ ತಿಳಿಯಪಡಿಸಬೇಕು ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಹಾಗೂ ಪಂಚಾಯತ್ ಸದಸ್ಯರ ನಿರ್ಣಯವನ್ನು ಪಡೆಯದಿರುವುದು ವಿಷಾದನೀಯ. ಆದ್ದರಿಂದ ಆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯ ಪ್ರಖ್ಯಾತ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಧನಂಜಯ ಕುಂದರ್, ಪಂಚಾಯತ್ ಸದಸ್ಯರುಗಳಾದ ಪ್ರಥ್ವಿರಾಜ್ ಶೆಟ್ಟಿ, ಸತೀಶ್ ನಾಯಕ್, ಸುರೇಶ ನಾಯಕ್, ಶರತ್ ಶೆಟ್ಟಿ, ಮೀನಾ ಪಿಂಟೊ, ರವಿರಾಜ್, ಮಂಜುನಾಥ್ ಆಚಾರ್ಯ, ವೆಂಕಟೇಶ್ ಕುಲಾಲ್, ಸಿಂಪ್ರಿಯಾ ರೊಡ್ರಿಗಸ್, ವಿನಯ್ ಆಚಾರ್ಯ, ಅನುಶಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.