ಮಂಗಳೂರು: ಮಂಗಳೂರಿನ ಹೊರವಲಯದ ಗುರುಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕಂಬಳ ಕ್ಷೇತ್ರದ ಸಾಧಕ, ಹಿರಿಯರಾದ ಗುರುಪುರ ಕೆದುಬರಿ ಗುರುವಪ್ಪ ಪೂಜಾರಿ (75) ಅವರು ಮೃತಪಟ್ಟಿದ್ದಾರೆ.
ಭಾನುವರ ತನ್ನ ಸ್ಕೂಟರ್ ನಲ್ಲಿ ಗುರುಪುರದ ಕಡೆ ತೆರಳುತ್ತಿದ್ದ ವೇಳೆ ಕಾರ್ ಢಿಕ್ಕಿ ಹೊಡೆದಿದ್ದು, ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಗುರುಪುರ ಕೆದುಬರೀ ಗುರವಪ್ಪ ಪೂಜಾರಿ ಅವರು ಕಂಬಳ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅಲ್ಲದೇ ಕಂಬಳದ ಕೋಣಗಳ ಯಜಮಾನರ ಪೈಕಿ ಬಹಳ ಹಿರಿಯರಾಗಿದ್ದರು. ಕಳೆದ ಹಲವು ವರ್ಷಗಳಿಂದ ಅಡ್ಡ ಹಲಗೆ, ಕನೆಹಲಗೆ ವಿಭಾಗದಲ್ಲಿ ಕೋಣಗಳನ್ನು ಸ್ಪರ್ಧೆಗೆ ಇಳಿಸುತ್ತಿದ್ದ ಅವರು, ಯಾವತ್ತು ತನಗೇ ಬಹುಮಾನ ಬರಬೇಕೆಂದು ಬಯಸಿದವರಲ್ಲ ಕಂಬಳದಲ್ಲಿ ತನ್ನ ಉತ್ತಮ ವ್ಯಕ್ತಿತ್ವ, ಗುಣಗಳಿಂದಲೇ ಗುರುತಿಸಿಕೊಂಡಿದ್ದರು. ಅವರ ನಿಧನ ಸುದ್ದಿ ತಿಳಿದು ಅಪಾರ ಕಂಬಳಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಕಂಬಳ ಸಮಿತಿ ಸಂತಾಪ ಸೂಚಿಸಿದೆ.