ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ಹಾಸನ: ರೈಲಿನ ಹಳಿಗೆ ತಲೆ ಕೊಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಳೆನರಸೀಪುರ ತಾಲ್ಲೂಕಿನ ಪೆದ್ದನಹಳ್ಳಿ ಬಳಿ ನಡೆದಿದೆ. ಹೊಳೆನರಸೀಪುರ ತಾಲೂಕಿನ ಇರಿತಳಲು ಗ್ರಾಮದ ಸದಾ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ರೈಲ್ವೆ ಹಳಿ ಬಳಿ ಬೈಕ್ ನಿಲ್ಲಿಸಿ, ಬಳಿಕ ರೈಲಿಗೆ ತಲೆಕೊಟ್ಟಿದ್ದಾನೆ. ಸದಾ ಚಿಕ್ಕಮಗಳೂರಿನ ಖಾಸಗಿ ಫೈನಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದನು. ಮನೆಗೆ ಹೋಗುತ್ತೇನೆಂದು ಚಿಕ್ಕಮಗಳೂರಿನಿಂದ ಬಂದಿದ್ದನು ಎನ್ನಲಾಗಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.