ಕೊಡವೂರು ದೇವಸ್ಥಾನದಲ್ಲಿ ಯೋಗ ಶಿವ ನಮಸ್ಕಾರ

ಉಡುಪಿ: ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆ ಇದರ ವತಿಯಿಂದ ಶಿವರಾತ್ರಿ ಪ್ರಯುಕ್ತ ಯೋಗ ಶಿವ ನಮಸ್ಕಾರ ಮತ್ತು ಅಷ್ಟೋತ್ತರ ಶತನಾಮಾವಳಿ ಪಠಣ, ಬಿಲ್ವಪತ್ರೆ ಮತ್ತು ಪುಷ್ಪಾರ್ಚನೆ ಕೊಡವೂರು ದೇವಳದ ವಠಾರದಲ್ಲಿ ನಡೆಯಿತು.   ಕಾರ್ಯಕ್ರಮವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಜಿ. ಕೊಡವೂರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅಷ್ಟೋತ್ತರ ಶತನಾಮಾವಳಿ ಅರ್ಚನೆಯನ್ನು ವಾಸುದೇವ ಭಟ್ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಜನಾರ್ದನ್ […]