ಪಡಿತರದೊಂದಿಗೆ ₹2,500 ನಗದು ದೊರೆಯಲಿದೆ.!

ಚೆನ್ನೈ: ತಮಿಳುನಾಡಿನಲ್ಲಿ ಜನವರಿ ತಿಂಗಳಿನಲ್ಲಿ ಪೊಂಗಲ್ (ಸಂಕ್ರಾತಿ ಹಬ್ಬ) ಆಚರಣೆ ಮಾಡಲಿದ್ದು, ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ರಾಜ್ಯದ 2.6 ಕೋಟಿ ಪಡಿತರ ಚೀಟಿದಾರರಿಗೆ ಪಡಿತರದೊಂದಿಗೆ ಉಡುಗೊರೆ ಮತ್ತು ₹2,500 ನಗದು ಘೋಷಣೆ ಮಾಡಿದೆ. 2021ರ ಜನವರಿ 4ರಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ನಗದು ಮತ್ತು ಪೊಂಗಲ್ ಗಿಫ್ಟ್ ಬ್ಯಾಗ್ ಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ತಿಳಿಸಿದ್ದಾರೆ.