ಯಕ್ಷಗಾನ ಹೆಜ್ಜೆ ಹಾಕುತ್ತಿರುವ ವಾರಣಾಸಿ ನಾಟ್ಯ ವಿದ್ಯಾಲಯದ 20 ವಿದ್ಯಾರ್ಥಿಗಳು

ಉಡುಪಿ: ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಇದೀಗ ರಾಷ್ಟ್ರಮಟ್ಟಕ್ಕೂ ತಲುಪಿದೆ ಎಂದು ಹೇಳಲು ಕರಾವಳಿಗರಾದ ನಮಗೆ ಹೆಮ್ಮೆಯಾಗುತ್ತದೆ. ಅದನ್ನು ಪರಿಚಯಿಸುವಲ್ಲಿ ಶ್ರಮಿಸುವುದು ಉಡುಪಿಯ ಯಕ್ಷಗಾನ ಕೇಂದ್ರವಾಗಿದೆ. ಉಡುಪಿಯ ಯಕ್ಷಗಾನ ಕೇಂದ್ರ ಈಗಾಗಲೇ ಯಶಸ್ವಿಯಾಗಿ 50 ವರ್ಷವನ್ನು ಪೂರೈಸಿ, ಸಾಕಷ್ಟು ಏಳು – ಬೀಳುಗಳನ್ನು ಕಂಡಿದೆ. ಸದಾ ಕ್ರಿಯಾಶೀಲವಾಗಿರುವ ಈ ಕೇಂದ್ರದಲ್ಲಿ ಯಾವಾಗಲೂ ತಾಳದ ಸದ್ದು ಕೇಳುತ್ತಲೆ ಇರುತ್ತದೆ. 6 ರಿಂದ ಹಿಡಿದು 60 ಪ್ರಾಯದವರು ಕೂಡ ಇಲ್ಲಿ ಬಂದು ಗುರುಗಳ ತಾಳಕ್ಕೆ ಹೆಜ್ಜೆ ಹಾಕುತ್ತಾರೆ. ಗುರುಕುಲ ಶಿಕ್ಷಣ […]