ಭೌಗೋಳಿಕ ರಾಜಕೀಯ ಸಮಸ್ಯೆಗೆ ಯುದ್ಧ ಪರಿಹಾರವಲ್ಲ: ಪ್ರೊ.ಎಂ.ಡಿ. ನಲಪತ್

ಮಣಿಪಾಲ: ರಷ್ಯಾ- ಉಕ್ರೇನ್ ಸಂಘರ್ಷದ ಈ ಸಂದರ್ಭದಲ್ಲಿ ಯುದ್ಧ ಅಪೇಕ್ಷಣೀಯ ಆಯ್ಕೆಯಲ್ಲ ಎಂದು ಯುನೆಸ್ಕೋ ಶಾಂತಿ ಪೀಠದ ಪ್ರೊ.ಎಂ.ಡಿ ನಲಪತ್ ಹೇಳಿದರು. “ಕಳೆದ ಕೆಲವು ವರ್ಷಗಳಲ್ಲಿನ ಭೌಗೋಳಿಕ ರಾಜಕೀಯ ಸನ್ನಿವೇಶಗಳು ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿವೆ, ಆದರೆ ಸೇನಾ ದಾಳಿಯ ಆಯ್ಕೆ ಇದಕ್ಕೆ ಪರಿಹಾರವಲ್ಲ” ಎಂದು ಅವರು ಪ್ರತಿಪಾದಿಸಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಮಾಹೆಯ ಆಶ್ರಯದಲ್ಲಿ ನಡೆದ ‘ರಷ್ಯಾ, ಉಕ್ರೇನ್, ಯುದ್ಧ ಮತ್ತು ಶಾಂತಿ’ ಕುರಿತ ವಿಶೇಷ ಉಪನ್ಯಾಸದಲ್ಲಿ ಯುನೆಸ್ಕೋ ಶಾಂತಿ ಪೀಠದ […]