ಜ್ಞಾನವಾಪಿ ದೇಗುಲದ ನೆಲಮಾಳಿಗೆಯಲ್ಲಿ ಪ್ರಾರ್ಥನೆಗೆ ಅಲಹಬಾದ್ ಹೈಕೋರ್ಟ್ ಮೊಹರು: ಮಸೀದಿ ಸಮಿತಿಯ ಅರ್ಜಿ ವಜಾ

ನವದೆಹಲಿ: ಜ್ಞಾನವಾಪಿ ದೇವಾಲಯ ಪ್ರಕರಣ ಸಂಬಂಧ ಹಿಂದೂ ಪಕ್ಷಕ್ಕೆ ಮತ್ತೊಮ್ಮೆ ಗೆಲುವಾಗಿದೆ. ಜ್ಞಾನವಾಪಿ ಸಂಕೀರ್ಣದ ‘ವ್ಯಾಸ್ ತೆಹ್ಖಾನಾ’ (Vyas Tehkhana)ದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಇಂದು ವಜಾಗೊಳಿಸಿದೆ. ಜ್ಞಾನವಾಪಿ ದೇಗುಲ ಸಂಕೀರ್ಣದಲ್ಲಿರುವ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿದ್ದ ಜ್ಞಾನವಾಪಿ ಮಸೀದಿ ಸಮಿತಿಯ ಮೇಲ್ಮನವಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ತೀರ್ಪು […]