ವಿಟ್ಲ: ಅಜ್ಞಾತ ವ್ಯಕ್ತಿಯ ಅಸ್ಥಿಪಂಜರ ಪತ್ತೆ

ವಿಟ್ಲ: ಇಲ್ಲಿನ ಪುಣಚ ಗ್ರಾಮದ ಆಜೇರು ನೆಲ್ಲಿಗುಡ್ಡೆ ಜರಿಮೂಲೆ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಅಜ್ಞಾತ ವ್ಯಕ್ತಿಯ ಮೃತದೇಹ ಪತ್ತೆಯಾದ ಘಟನೆ ವರದಿಯಾಗಿದೆ. ಇಲ್ಲಿನ ನಿವಾಸಿಗಳು ಗುಡ್ಡಕ್ಕೆ ಸೊಪ್ಪು ಮತ್ತು ಸೌದೆ ತರಲೆಂದು ಹೋಗಿದ್ದ ಸಮಯದಲ್ಲಿ ಒಂದು ಮೊಬೈಲ್ ಒಂದು ಪತ್ತೆಯಾಗಿದೆ. ಇದನ್ನು ಕಂಡು ಸುತ್ತ ಮುತ್ತ ತಡಕಾಡಿದಾಗ ಮೃತದೇಹವೊಂದು ಪತ್ತೆಯಾಗಿದ್ದು ನಿವಾಸಿಗಳು ಭಯಗೊಂಡಿದ್ದಾರೆ. ಅಲ್ಲೇ ಪಕ್ಕದಲ್ಲಿರುವ ಮರದಲ್ಲಿ ಹಗ್ಗವೊಂದು ನೇತಾಡುತ್ತಿದ್ದು ಕೊಳೆತ ಮೃತದೇಹವು ನೆಲದಲ್ಲಿ ಬಿದ್ದಿತ್ತು. ದೇಹದ ಕುರುಹಾಗಿ ಅಸ್ಥಿಪಂಜರ ಮಾತ್ರ ಕಾಣಿಸುತ್ತಿದ್ದುದರಿಂದ ವ್ಯಕ್ತಿಯು ಸತ್ತು ಹಲವು […]
ಅಮೂಲ್ ಐಸ್ ಕ್ರೀಂ ವಾಹನದಲ್ಲಿ ಗೋಕಳ್ಳತನ: ವಾಹನ ಪೊಲೀಸ್ ವಶ ಆರೋಪಿಗಳು ಪರಾರಿ

ಮಂಗಳೂರು: ಅಮುಲ್ ಐಸ್‌ಕ್ರೀಂ ಎಂಬ ಹೆಸರಿನ ವಾಹನದಲ್ಲಿ ಕೇರಳದ ಕಸಾಯಿಖಾನೆಗೆ ಮೂರು ದನಗಳನ್ನು ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ವಿಟ್ಲ ಪೊಲೀಸರ ತಂಡ ಮೂರು ದನಗಳನ್ನು ಹಾಗೂ ವಾಹನವನ್ನು ವಿಟ್ಲ ಸಮೀಪದ ಸಾಲೆತ್ತೂರು ಕಟ್ಟತ್ತಿಲ ಬಳಿ ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಸಾಲೆತ್ತೂರು ರಸ್ತೆ ಮೂಲಕ ಕೇರಳದಲ್ಲಿರುವ ಕಸಾಯಿಖಾನೆಗೆ ಮೂರು ದನಗಳನ್ನು ಅಮುಲ್ ಐಸ್‌ಕ್ರೀಂನ ವಾಹನದಲ್ಲಿ ಕೊಂಡೊಯ್ಯಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಾಲೆತ್ತೂರು ಕಟ್ಟತ್ತಿಲ ಎಂಬಲ್ಲಿ ವಿಟ್ಲ ಸಬ್ ಇನ್‌ಸ್ಪೆಕ್ಟರ್ ಹಾಗೂ […]
ಬಂಟ್ವಾಳ: ವಿಟ್ಲಾದಲ್ಲಿ ನಿರಂತರ ಖೋಟ ನೋಟು ಚಲಾವಣೆ; ಪತ್ತೆಗಾಗಿ ಜನರ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ 500 ರೂಪಾಯಿಯ ಖೋಟಾ ನೋಟು ನಿರಂತರವಾಗಿ ಚಲಾವಣೆಯಾಗಿರೋದು ಪತ್ತೆಯಾಗಿದೆ. ವಿಟ್ಲದ ಮಂಗಳೂರು ರಸ್ತೆಯಲ್ಲಿರುವ ಕೋಳಿ ಅಂಗಡಿಯೊಂದಕ್ಕೆ ಬಂದ ಅಪರಿಚಿತ ವ್ಯಕ್ತಿಗಳು 500 ರೂಪಾಯಿಯ ಖೋಟಾ ನೋಟು ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಇಲ್ಲಿ ಎರಡು ಖೋಟಾ ನೋಟು ಪತ್ತೆಯಾಗಿದೆ. ಕೆಲ ಭಾಗಗಳಲ್ಲಿ ಅಂಗಡಿ ಮಾಲಕರು ಇಲ್ಲದ ಬಗ್ಗೆ ಮಾಹಿತಿ ಪಡೆದು ಖೋಟಾ ನೋಟು ಚಲಾವಣೆಗಾರರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇದೇ ರೀತಿ ಹಲವು ಅಂಗಡಿಗಳಲ್ಲಿ 500 ರೂಪಾಯಿಯ […]