ಶಾರ್ಜಾ ಅಂತರಾಷ್ಟ್ರೀಯ ಕ್ರಿಕೆಟ್ ಅಂಗಣದಲ್ಲಿ ವಿಠಲ ನಾಯಕರಿಗೆ ಅಭಿನಂದನೆ.

ಉಡುಪಿ: ದುಬೈನಲ್ಲಿ ಕಳೆದ ಒಂದೂವರೆ ದಶಕದಿಂದ ಕ್ರಿಕೆಟ್ ಆಟದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕುಂದಾಪುರ ಸೂರಾಲಿನ ವಿಠಲ ರಿಶಾನ್ ನಾಯಕರಿಗೆ ಶಾರ್ಜಾದ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ವಿಶೇಷ ಅಭಿನಂದನಾ ಸಮಾರಂಭವು ಜರಗಿತು. ದುಬೈನ ಪ್ರಸಿದ್ಧ ಕ್ರಿಕೆಟ್ ತಂಡಗಳಾದ ಟೆಕ್ನೋ-ಟೈಟಾನ್ಸ್, ಟೆಕ್ನೋ-ಕ್ರಿಕೆಟರ್ಸ್, ಟೆಕ್ನೋ-ವಾರಿಯರ್ಸ್ ತಂಡಗಳಿಗೆ ನಾಯಕನಾಗಿ ಹಾಗೂ ವಿದ್ವಾರ್ಸ್ ಬಾಯ್ಸ್ ಮಂಗಳೂರು ತಂಡಕ್ಕೆ ಮಾರ್ಗದರ್ಶಕರಾಗಿ ಉತ್ಕೃಷ್ಟ ಯಶಸ್ಸು ಫಲಿತಾಂಶದ ಜೊತೆಗೆ ಹಲವಾರು ಟ್ರೋಫಿಗಳನ್ನು ಮುಡಿಗೇರಿಸಿಕೊಳ್ಳುವಲ್ಲಿ ವಿಠಲ ನಾಯಕ್ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಈ ಪ್ರಯುಕ್ತ ಫೆಬ್ರವರಿ ಹದಿನಾರರ ಸಂಜೆ […]